Home » Caste Survey : ಕೊನೆಗೂ ವಿರೋಧಕ್ಕೆ ಮಣಿದ ಸರ್ಕಾರ – ‘ಕ್ರಿಶ್ಚಿಯನ್’ ಜೊತೆ ಇದ್ದ ಹಿಂದೂ ಜಾತಿಗಳ ಕಲಂ ತೆಗೆಯಲು ನಿರ್ಧಾರ!!

Caste Survey : ಕೊನೆಗೂ ವಿರೋಧಕ್ಕೆ ಮಣಿದ ಸರ್ಕಾರ – ‘ಕ್ರಿಶ್ಚಿಯನ್’ ಜೊತೆ ಇದ್ದ ಹಿಂದೂ ಜಾತಿಗಳ ಕಲಂ ತೆಗೆಯಲು ನಿರ್ಧಾರ!!

0 comments

Caste Survey: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಸೇರ್ಪಡೆ ಸೇರ್ಪಡೆ ವಿಚಾರ ರಾಜ್ಯಾದ್ಯಂತ ಹೊಸ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಬಗ್ಗೆ ಸ್ವತಹ ಸಂಪುಟ ಸಚಿವರೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೊನೆಗೂ ಈ ವಿಚಾರವಾಗಿ ಮಣಿದಿರುವ ರಾಜ್ಯ ಸರ್ಕಾರ ಈ ರೀತಿಯ ಜಾತಿ ಹೆಸರುಗಳನ್ನು ಕೈ ಬಿಡಲು ಮುಂದಾಗಿದೆ.

ಹೌದು, ಕ್ರಿಶ್ಚಿಯನ್‌ ಬ್ರಾಹ್ಮಣ, ಕ್ರಿಶ್ಚಿಯನ್‌ ಒಕ್ಕಲಿಗ, ಕ್ರಿಶ್ಚಿಯನ್‌ ಲಿಂಗಾಯತ, ಕ್ರಿಶ್ಚಿಯನ್‌ ಕುರುಬ, ಕ್ರಿಶ್ಚಿಯನ್‌ ದಲಿತ ಎಂಬಿತ್ಯಾದಿಯಾಗಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಜೋಡಿಸಿ ಜಾತಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ವಿಪರೀತ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲ, ಸಂಪುಟ ಸಭೆಯಲ್ಲಿ ಖುದ್ದು ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ವಿವಾದಗಳ ಮಧ್ಯೆ ಜಾತಿಗಣತಿ ಮಾಡಬೇಕಾ? ಸದ್ಯಕ್ಕೆ ಬೇಡ ಮುಂದೂಡಿ ಎಂದು ಕೆಲವು ಮಂದಿ ಸಚಿವರು ಸಿಎಂಗೆ ಆಗ್ರಹಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಜಾತಿ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Nandini : GST ಪರಿಷ್ಕರಣೆ – ನಂದಿನಿ ಮೊಸರು, ತುಪ್ಪದ ದರದಲ್ಲಿ ಭಾರೀ ಇಳಿಕೆ !!

ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಇವತ್ತು (ಸೆಪ್ಟೆಂಬರ್ 19) ಬೆಳಗ್ಗೆ 10ಗಂಟೆಗೆ ಸಂಪುಟ ಸಹೋದ್ಯೋಗಿಗಳ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ಜಾತಿಗಣತಿ ಗೊಂದಲಗಳ ಬಗ್ಗೆ ಚರ್ಚಿಸಲಿದ್ದಾರೆ. ಹೆಚ್ಚುವರಿ ಜಾತಿಗಳನ್ನು ತೆಗೆದು ಸಮೀಕ್ಷೆ ಮುಂದುವರಿಸುವ ಬಗ್ಗೆ ಈ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

You may also like