Poonam Pandey: ದೆಹಲಿಯಲ್ಲಿ ನಡೆಯುವ ಲವ್ ಕುಶ್ ರಾಮಲೀಲಾ ನಾಟಕದಲ್ಲಿ ನಟಿ ಪೂನಂ ಪಾಂಡೆ ಅವರನ್ನು ಮಂಡೋದರಿ ಪಾತ್ರಕ್ಕೆ ಆಯ್ಕೆ ಮಾಡಲಾಗಿದ್ದು, ಇದು ಇದೀಗ ಹಿಂದೂಪರ ಸಂಘಟನೆಗಳು ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಬೋಲ್ಡ್ ಚಿತ್ರಕ್ಕೆ ಹೆಸರುವಾಸಿಯಾದ ಪೂನಂ ಪಾಂಡೆ ಅವರ ಆಯ್ಕೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಸಂತ ಸಮುದಾಯದ ಪ್ರತಿನಿಧಿಗಳು ಸಹ ಬಹಿರಂಗವಾಗಿ ಪ್ರತಿಭಟಿಸುತ್ತಿದ್ದಾರೆ.
ರಾಮಲೀಲಾ ಸಮಿತಿಯ ಅಧ್ಯಕ್ಷರಿಗೆ ಸಲಹೆ ನೀಡುತ್ತಾ, ರಾಮಚರಿತಮಾನಸದಲ್ಲಿ ಶ್ರೀರಾಮನ ಲೀಲೆಗಳು ಅವರ ಪಾತ್ರ ಮತ್ತು ಆದರ್ಶಗಳನ್ನು ಆಧರಿಸಿವೆ ಎಂದು ಹೇಳಿದರು. ಆದ್ದರಿಂದ, ಪಾತ್ರಗಳನ್ನು ಆಯ್ಕೆ ಮಾಡುವಾಗ ವಿವೇಚನೆ ಮತ್ತು ಸಭ್ಯತೆಯನ್ನು ಗಮನಿಸಬೇಕು ಎಂದು ಸಂತರು ಹೇಳಿದ್ದಾರೆ.
ಇದನ್ನೂ ಓದಿ:Udupi: ಉಡುಪಿ: ಉಕ್ಕಿನ ರೈಲ್ವೆ ಬ್ರಿಡ್ಜ್ ಉದ್ಘಾಟನೆಗೆ ಸಿದ್ಧ
ಇನ್ನು ಇತ್ತ ಕಡೆ, ರಾವಣನ ಪತ್ನಿ ಮಂಡೋದರಿ ಪಾತ್ರ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಪೂನಂ ಪಾಡೆ ಖುಷಿಯಾಗಿದ್ದಾರೆ, ಹಾಗೂ ರಾಮಲೀಲಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾವಣ ಪಾತ್ರಧಾರಿ ನಟ ಆರ್ಯ ಬಬ್ಬರ್ ಕೂಡಾ ತಮ್ಮ ಧನ್ಯವಾದವನ್ನು ಅರ್ಪಿಸಿದ್ದಾರೆ.
ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುವ 10 ದಿನಗಳ ರಾಮಲೀಲಾದಲ್ಲಿ, ಕಿನ್ಶುಕ್ ವೈದ್ಯ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ರಿನಿ ಆರ್ಯ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಬಿಜೆಪಿ ಸಂಸದ ಮನೋಜ್ ತಿವಾರಿ ಪರಶುರಾಮನ ಪಾತ್ರದಲ್ಲಿ ನಟಿಸಲಿದ್ದಾರೆ.
