Metro: ಬೆಂಗಳೂರು ನಗರದಲ್ಲಿ ಜನರು ಹೆಚ್ಚಾಗಿ ನಮ್ಮ ಮೆಟ್ರೋ (Namma Metro) ಸಾರಿಗೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಆದರಲ್ಲೂ ಹಳದಿ ಮಾರ್ಗದಲ್ಲಿ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಾರೆ. ಇನ್ನು ಸಾವಿರಾರು ಮಂದಿ ಮನೆಗಳಿಂದ ನಿಲ್ದಾಣಕ್ಕೆ ಕಾರ್, ಬೈಕಿನಲ್ಲಿ ಬಂದು ಅಲ್ಲಿಂದ ಮೆಟ್ರೋ ರೈಲುಗಳಲ್ಲಿ ಸಂಚಾರ ನಡೆಸುತ್ತಾರೆ. ಹಾಗಿರುವಾಗ ಹಳದಿ ಮಾರ್ಗದ 11 ನಿಲ್ದಾಣ ಎಲ್ಲೆಲ್ಲಿ ಇದೆ, ಬೆಲೆ ಎಷ್ಟು ಎಂದು ಇಲ್ಲಿ ತಿಳಿಸಲಾಗಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದ 11 ನಿಲ್ದಾಣದಲ್ಲಿ ಪಾರ್ಕಿಂಗ್ ದರ ಎಷ್ಟು?
ಹಳದಿ ಮಾರ್ಗದ 11 ನಿಲುಗಡೆಯಲ್ಲಿ ಟು ವ್ಹೀಲರ್ ಬೆಲೆ 15 ರೂಪಾಯಿಗಳಿದ್ದರೆ, ಫೋರ್ ವ್ಹೀಲರ್ ಬೆಲೆ 30 ರೂಪಾಯಿ ನಿಗದಿ ಪಡಿಸಲಾಗಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದ ಯಾವೆಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ಲಭ್ಯ?
• ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ
• ರಾಗಿಗುಡ್ಡ
• ಬಿಟಿಎಂ ಲೇಔಟ್
• ಸೆಂಟ್ರಲ್ ಸಿಲ್ಕ್ ಬೋರ್ಡ್
• ಬೊಮ್ಮನಹಳ್ಳಿ
• ಹೊಂಗಸಂದ್ರ
• ಕುಡ್ಲು ಗೇಟ್
• ಹೊಸ ರಸ್ತೆ
• ಎಲೆಕ್ಟ್ರಾನಿಕ್ ಸಿಟಿ
• ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ
• ಬಯೋಕಾನ್ ಹೆಬ್ಬಗೋಡಿ
ಇದನ್ನೂ ಓದಿ:PM Modi: ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಪ್ರಧಾನಿ ಮೋದಿಯಿಂದ ಇಂದು ಉದ್ಘಾಟನೆ
