5
Dhruva Sarja: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಕೋಲಾರ (Kolar) ತಾಲೂಕು ಕೋರಗೊಂಡನಹಳ್ಳಿಯಲ್ಲಿರುವ, ಪುರಾತನ ಇತಿಹಾಸ ಹೊಂದಿರುವ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ (Kashi Vishweshwara Swamy Temple) ನಟ ಧ್ರುವ ಸರ್ಜಾ (Dhruva Sarja) ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಶಿ ವಿಶ್ವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ಮಾಡಿದ್ದು, ಕಾಲಬೈರವನಿಗೆ ವಿಶೇಷ ಅಭಿಷೇಕ ನೆರವೇರಿಸಿದ್ದಾರೆ.
ಧ್ರುವ ಸರ್ಜಾ ವಿಶೇಷ ಪೂಜೆ ಸಲ್ಲಿಕೆ ವೇಳೆ ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಸಹ ಪೂಜೆಯಲ್ಲಿ ಭಾಗಿಯಾಗಿದ್ದರು.
