GST : ಕೇಂದ್ರ ಸರ್ಕಾರ GST ಪರಿಷ್ಕರಣೆ ಮಾಡಿದ ಬಳಿಕ ಹಲವು ಕಾರು ಮತ್ತು ಬೈಕ್ ಕಂಪನಿಗಳು ದರವನ್ನು ಇಳಿಸಿ ತಮ್ಮ ಹೊಸ ದರಗಳನ್ನು ಘೋಷಿಸಿಕೊಂಡಿವೆ. ನಿನ್ನೆಯಿಂದ ಅಂದರೆ ಸೆಪ್ಟೆಂಬರ್ 22 ರಿಂದ ಈ ದರಗಳು ಜಾರಿಗೆ ಬಂದಿವೆ. ಇದರ ಬೆನ್ನಲ್ಲೇ ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಇಂಡಿಯಾ ತನ್ನ ICE SUV (ಇಂಧನ ಚಾಲಿತ ಎಸ್‌ಯುವಿ) ಬಿಡಿಭಾಗಗಳು ಮತ್ತು ಪರಿಕರಗಳು ಸೇರಿದಂತೆ ತನ್ನ ಪ್ರಮುಖ ಕಾರುಗಳ ಮೇಲಿನ GST ಕಡಿತದ ದರಗಳನ್ನು ಘೋಷಿಸಿಕೊಂಡಿದೆ.
ಯಾವ ಕಾರಿನ ಮೇಲೆ ಎಷ್ಟು ಬೆಲೆ ಇಳಿಕೆ?
* ಎಂಜಿ ಆಸ್ಟರ್ ಎಸ್‌ಯುವಿ ಮೇಲೆ ಜಿಎಸ್‌ಟಿ ಕಡಿತದ ನಂತರ ರೂ. 34 ಸಾವಿರ ಇಳಿಕೆಯಾಗಿದ್ದು, ರೂ. 9.65 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
* ಎಂಜಿ ಹೆಕ್ಟರ್ ಎಸ್‌ಯುವಿ ಮೇಲೆ ಜಿಎಸ್‌ಟಿ ಕಡಿತದ ನಂತರ ರೂ. 49 ಸಾವಿರ ಇಳಿಕೆಯಾಗಿದ್ದು, ಈಗ ರೂ. 14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಕಾರು ಖರೀದಿಗೆ ಲಭ್ಯವಿದೆ.
• ಎಂಜಿ ಗ್ಲೋಸ್ಟರ್ ಮೇಲೆ ರೂ. 2.83 ಲಕ್ಷ ಇಳಿಕೆಯಾಗಿದ್ದು, ರೂ. 39.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
• MG ಗ್ಲೋಸ್ಟರ್ ಗ್ರಾಹಕರು ರೂ. 3,50,000 ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು
• JSW MG ಮೋಟಾರ್ ಶೇ100 ಆನ್ – ರೋಡ್ ಫಂಡಿಂಗ್ ಮತ್ತು ಮೂರು ತಿಂಗಳ EMI ರಜೆ ಸೇರಿದಂತೆ ಆಕರ್ಷಕ ಹಣಕಾಸು ಆಯ್ಕೆಗಳನ್ನು ಸಹ ನೀಡುತ್ತಿದೆ.
ಇದನ್ನೂ ಓದಿ:Maruti Suzuki: GST ಕಡಿತ ಬೆನ್ನಲ್ಲೇ ಒಂದೇ ದಿನದಲ್ಲಿ ಮಾರುತಿ ಸುಜುಕಿಯ 30,000 ಕಾರು ಮಾರಾಟ !!
