ಬದಿಯಡ್ಕ: ವ್ಯಕ್ತಿ ಒಬ್ಬರ ಗಂಟಲಲ್ಲಿ ಮೊಟ್ಟೆ ಹಾಗೂ ಬಾಳೆ ಹಣ್ಣು ಸಿಲುಕಿ ಮೃತಪಟ್ಟ ಘಟನೆ ಸೆ.21ರಂದು ಸಂಜೆ ಬದಿಯಡ್ಕ ಸಮೀಪದ ಬಾರಡ್ಕದಲ್ಲಿ ನಡೆದಿದೆ.
ಬಾರಡ್ಕ ಚುಳ್ಳಿಕ್ಕಾನದ ದಿಟ್ಟ ಪೊಕ್ರಯಿಲ್ ಡಿ’ಸೋಜಾ ಎಂಬವರ ಪುತ್ರ ಬೇಳ ಕಟ್ಟತ್ತಡ್ಕದ ವೆಲ್ಡಿಂಗ್ ಅಂಗಡಿಯೊಂದರಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ
ವಿಸಾಂತಿ ಡಿ’ಸೋಜಾ (52) ಮೃತ ಪಟ್ಟ ದುರ್ದೈವಿ.
ಇದನ್ನೂ ಓದಿ:ಪ್ರಯಾಣಕ್ಕೆ GST ಎಷ್ಟು? ಯಾರಿಗೆ ವಿಮಾನ, ಹೋಟೆಲ್ ಅಗ್ಗ? ಯಾರಿಗೆ ಶೇ.40 ದುಬಾರಿ?
ಅವರು ಬಾರಡ್ಕದ ಗೂಡಂಗಡಿಯೊಂದರಿಂದ ಮೊಟ್ಟೆ ಹಾಗೂ ಬಾಳೆ ಹಣ್ಣು ಖರೀದಿಸಿ ಸೇವಿಸುತ್ತಿದ್ದಾಗ ಅದು ಗಂಟಲಲ್ಲಿ ಸಿಲುಕಿದೆ. ಉಸಿರಾಟ ತೊಂದರೆಗೊಳಗಾದ ಅವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿ ಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
