Home » Dasara Holiday : ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆ? ಶಿಕ್ಷಣ ಸಚಿವರಿಂದ ಬಿಗ್ ಅಪ್ಡೇಟ್

Dasara Holiday : ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆ? ಶಿಕ್ಷಣ ಸಚಿವರಿಂದ ಬಿಗ್ ಅಪ್ಡೇಟ್

0 comments

Dasara Holiday: ವಿದ್ಯಾರ್ಥಿಗಳೆಲ್ಲರೂ ದಸರಾ ರಜೆಯ ಮಜೆ ಮಾಡುತ್ತಿದ್ದಾರೆ. ಆದರೆ ಶಿಕ್ಷಕರು ಮಾತ್ರ ಜಾತಿ ಸಮೀಕ್ಷೆ ನಡೆಸುತ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆಯಾಗುತ್ತದೆ ಎಂಬ ಸುದ್ದಿ ಒಂದು ಕೇಳಿಬರುತ್ತಿದೆ. ಈ ಬಗ್ಗೆ ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ದಸರಾ ರಜೆ ವಿಸ್ತರಣೆ ಆಗಬಹುದಾ ಎನ್ನುವ ಪ್ರಶ್ನೆಗಳು ಎದ್ದಿದ್ದು ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಅಪ್ಡೇಟ್‌ ಮಾಹಿತಿಯೊಂದನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ರಜೆ ವಿಸ್ತರಣೆ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ರಜೆ ಮುಗಿದ ತಕ್ಷಣವೇ ಶಾಲೆಗಳು ಆರಂಭ ಆಗುತ್ತವೆ ಎಂದರು.

ಅಲ್ಲದೆ ಶಾಲಾ ಅವಧಿಯಲ್ಲಿ ಬೋಧನೆಗೆ ಅಡ್ಡಿ ಆಗಬಾರದು ಎನ್ನುವ ಕಾರಣದಿಂದ ಜಾತಿವಾರು ಸಮೀಕ್ಷೆಗೆ ದಸರಾ ರಜೆಯನ್ನು ಬಳಸಿಕೊಂಡಿದ್ದೇವೆ. ರಜೆ ಮುಗಿದ ತಕ್ಷಣವೇ ಶಾಲೆಗಳು ಪುನರಾರಂಭ ಆಗಲಿವೆ. ಸಮೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಕುರಿತು ಚರ್ಚೆ ನಡೆಸಲಾಗುವುದು. ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಸಚಿವರು ಹೇಳಿದಂತೆ ದಸರಾ ರಜೆ ಪಡೆಯದ ಶಿಕ್ಷಕರಿಗೆ ಬಳಿಕ ಪರ್ಯಾಯ ರಜೆ ದೊರೆತರೆ ಅವರಿಗೂ ಸಹ ತುಸು ವಿಶ್ರಾಂತಿ ಸಿಗಲಿದ್ದು, ಒತ್ತಡ ಕಡಿಮೆ ಆದಂತಾಗಲಿದೆ. ಅಲ್ಲದೆ, ಕುಟುಂಬದ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ಸಮಯ ಸಿಗಲಿದೆ.

You may also like