Katrina Kaif: ಬಾಲಿವುಡ್‌ನ ತಾರಾಜೋಡಿಗಳಲ್ಲಿ ಒಂದಾಗಿರುವ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದು, ತಮ್ಮ ಪ್ರೆಗ್ನೆನ್ಸಿ ಯನ್ನು ಘೋಷಿಸಿಕೊಂಡಿದ್ದಾರೆ. ಯಸ್, ದಂಪತಿಗಳು ತಮ್ಮ ಮಗುವಿನ ಬಂಪ್ ಫೋಟೋದೊಂದಿಗೆ ಕತ್ರಿನಾ ಗರ್ಭಿಣಿ ಎನ್ನುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಕತ್ರಿನಾ ದಂಪತಿಯ ಈ ಖುಷಿಗೆ ಕಾರಣ ಕರ್ನಾಟಕದ ಪ್ರಸಿದ್ಧ ದೇವಾಲಯವಾದ ಕುಕ್ಕೆ ಸುಬ್ರಮಣ್ಯದಲ್ಲಿ ಮಾಡಿದ ಪೂಜೆಯ ಫಲವೇ ಕಾರಣ ಎನ್ನಲಾಗುತ್ತಿದೆ.
ಹೌದು, ಬಾಲಿವುಡ್‌ನ ಟಾಪ್ ನಟಿಯಾಗಿರುವ ಕತ್ರಿನಾ ಕೈಫ್ ಅವರು ಕಳೆದ ಮಾರ್ಚ್‌ನಲ್ಲಿ ಕರ್ನಾಟಕದ ಪ್ರಸಿದ್ಧ ದೇಗುಲವಾದ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಕತ್ರಿನಾ ಕುಕ್ಕೆಯಲ್ಲಿ ಎರಡು ದಿನ ವಾಸ್ತವ್ಯ ಹೂಡಿ, ಸರ್ಪ ಸಂಸ್ಕಾರ ಪೂಜೆ ಸಹ ಮಾಡಿಸಿದ್ದರು. ಆಶ್ಲೇಷಾ ನಕ್ಷತ್ರದಂದು ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದ್ದರು. ಬೆಳಿಗ್ಗೆ ಆದಿ ಸುಬ್ರಹ್ಮಣ್ಯ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಮೊದಲ ಹಂತದ ಆಚರಣೆ ನೆರವೇರಿಸಿ, ದೇವಸ್ಥಾನದಲ್ಲಿ ಅನ್ನ ಪ್ರಸಾದ ಸೇವಿಸಿದರು. ಈಗ ದೇವರು ಕಣ್ಣು ಬಿಟ್ಟಿದ್ದಾನೆ.
ಇನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮಾಡಲಾಗುವುದು. ಕುಟುಂಬದಲ್ಲಿ ಸರ್ಪದೋಷ ಇದ್ದರೆ ಮಕ್ಕಳಾಗೋದಿಲ್ಲ, ಚರ್ಮ ಸಮಸ್ಯೆ ಕೂಡ ಬರುವುದು. ಹೀಗಾಗಿ ಆಶ್ಲೇಷ ಬಲಿ ಎಂದು ಸರ್ಪ ಸಂಸ್ಕಾರ ಮಾಡಲಾಗುವುದು. ಆಗ ಸರ್ಪ ದೋಷ ನಿವಾರಣೆ ಆಗಿ ಮಕ್ಕಳಾಗುತ್ತವೆ. ಕರ್ನಾಟಕದಲ್ಲಿರುವ ಈ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಅಂತಯೇ ಕತ್ರಿನಾ ಕೈಫ್ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿದ ಬಳಿಕ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಿದೆ ಎನ್ನಲಾಗುತ್ತಿದೆ.
ಈ ಕುರಿತಾಗಿ ಪೋಸ್ಟ್ ಹಂಚಿಕೊಂಡಿರುವ ಕತ್ರಿನಾ ದಂಪತಿ “ನಮ್ಮ ಜೀವನದ ಹೊಸ ಅಧ್ಯಾಯವನ್ನು ತುಂಬಿದ ಹೃದಯಗಳೊಂದಿಗೆ ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ” ಎಂದು ಹೇಳುವ ಮೂಲಕ ಖುಷಿ ಕ್ಷಣವನ್ನ ಹಂಚಿಕೊಂಡಿದ್ದಾರೆ.
