Home » Tata Motors ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, 4.60 ಲಕ್ಷಕ್ಕೆ ಹೊಸ ಕಾರು!

Tata Motors ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ, 4.60 ಲಕ್ಷಕ್ಕೆ ಹೊಸ ಕಾರು!

0 comments

ನವದೆಹಲಿ: ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೆ ಬಂದಿದ್ದು, ಇದರ ಪೂರ್ಣ ಮಾರ್ಜಿನ್ ಅನ್ನು ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ವರ್ಗಾಯಿಸಲು ಹೊರಟಿದೆ. ಟಾಟಾ ತನ್ನ ಹಲವು ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿ ವಾಹನಗಳ ಬೆಲೆಯಲ್ಲಿ ರೂ.65,000 ರಿಂದ ರೂ.1.55 ಲಕ್ಷವರೆಗೆ ಇಳಿಕೆ ಮಾಡಿದೆ. ಹಾಗಾದ್ರೆ ನೋಡೋಣ, ಯಾವ ಕಾರಿನ ಎಕ್ಸ್-ಶೋರೂಂ ದರ ಎಷ್ಟಾಗಿದೆ ಎಂದು.

ಟಾಟಾ ಟೈಗೋರ್:
ಟಾಟಾ ಟೈಗೋರ್ ಒಂದು ಸೆಡಾನ್ ವಾಹನವಾಗಿದ್ದು, ಇದರ ದರವು ರೂ.80,000 ತನಕ ಕಡಿಮೆಯಾಗಿದೆ. ಈಗ ಇರುವ ರೂ.5.49 ಲಕ್ಷದಿಂದ ರೂ.8.74 ಲಕ್ಷ (ಎಕ್ಸ್-ಶೋರೂಂ) ಬೆಲೆಯಿದೆ. 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ ಇದ್ದು, ಈ ವಾಹನವು 19 ರಿಂದ 28 ಕಿ.ಮೀ ಅದ್ಭುತ ಮೈಲೇಜ್ ನೀಡುತ್ತದೆ.

ಟಾಟಾ ಟಿಯಾಗೊ:
ಈ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯಲ್ಲಿ ರೂ.75,000 ವರೆಗೆ ಬೆಲೆ ಇಳಿಕೆ ಕಂಡಿದೆ. ರೂ.4.57 ಲಕ್ಷ ಹಾಗೂ ಗರಿಷ್ಠ ರೂ.8.09 ಎಕ್ಸ್-ಶೋರೂಂ ದರ ಇರುವ ಕಾರು ಕೂಡಾ 19 ರಿಂದ 28 ಕಿ.ಮೀ ಮೈಲೇಜ್ ನೀಡುತ್ತದೆ.

ಟಾಟಾ ಆಲ್ಟ್ರೋಜ್:
ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ರೂ.1.10 ಲಕ್ಷ ತನಕ ಬೆಲೆಯು GST ಡಬ್ಬಲ್ ಟಿಯರ್ ಮೂಲಕ ಇಳಿಮುಖವಾಗಿದೆ. ರೂ.6.30 ಲಕ್ಷ ಮತ್ತು ಗರಿಷ್ಠ ರೂ.10.51 ಲಕ್ಷ ಎಕ್ಸ್-ಶೋರೂಂ ಇರುವ ಈ ಕಾರು 19 ರಿಂದ 26.2 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಟಾಟಾ ಪಂಚ್:
ಈ ಮೈಕ್ರೋ ಎಸ್‌ಯುವಿ ದರ ರೂ.85,000 ವರೆಗೆ ಕಡಿಮೆಯಾಗಿದ್ದು ಹಳೆಯ ಬೆಲೆ. ರೂ.5.50 ಲಕ್ಷದಿಂದ ರೂ.9.30 ಲಕ್ಷ (ಎಕ್ಸ್-ಶೋರೂಂ) ಆಗಿತ್ತು.

ಟಾಟಾದ ಹೊಸ ದರ ಎಷ್ಟಿದೆ?

ಟಾಟಾ ಟಿಗೊರ್: ರೂ.5.49 ಲಕ್ಷದಿಂದ ರೂ.8.74 ಲಕ್ಷ
ಟಾಟಾ ಟಿಯಾಗೊ: ರೂ.4.57 ಲಕ್ಷದಿಂದ ರೂ.8.09 ಲಕ್ಷ
ಟಾಟಾ ಆಲ್ಟ್ರೋಜ್ : ರೂ.6.30 ಲಕ್ಷದಿಂದ ರೂ.10.51 ಲಕ್ಷ
ಟಾಟಾ ಪಂಚ್: ರೂ.5.50 ಲಕ್ಷದಿಂದ ರೂ.9.30 ಲಕ್ಷ
ಟಾಟಾ ನೆಕ್ಸಾನ್: ರೂ.7.32 ಲಕ್ಷದಿಂದ ರೂ.14.50 ಲಕ್ಷ
ಟಾಟಾ ಕರ್ವ್: ರೂ.9.66 ಲಕ್ಷದಿಂದ ರೂ.19.52 ಲಕ್ಷ
ಟಾಟಾ ಹ್ಯಾರಿಯರ್ : ರೂ.14 ಲಕ್ಷದಿಂದ ರೂ.25.25 ಲಕ್ಷ
ಟಾಟಾ ಸಫಾರಿ: ರೂ.14.66 ಲಕ್ಷದಿಂದ ರೂ.25.96 ಲಕ್ಷ

ಟಾಟಾ ನೆಕ್ಸಾನ್:
ಟಾಟಾ ನೆಕ್ಸಾನ್ ಜನಪ್ರಿಯ ಎಸ್‌ಯುವಿ. ಕನಿಷ್ಠ ರೂ.7.32 ಲಕ್ಷ ಹಾಗೂ ಗರಿಷ್ಠ ರೂ.14.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಇದು ಹೊಂದಿತ್ತು. ಇದರ ಬೆಲೆಯಲ್ಲಿ ರೂ.1.55 ಲಕ್ಷವರೆಗೆ ಬೆಲೆ ಇಳಿಕೆಯಾಗಿದೆ.
ಟಾಟಾ ಕರ್ವ್:
ಈ ಕೂಪೆ ಎಸ್‌ಯುವಿಯ ದರವು ರೂ.65,000 ವರೆಗೆ ಕಡಿಮೆಯಾಗಿದೆ. ರೂ.9.66 ಲಕ್ಷದಿಂದ ರೂ.19.52 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.
ಟಾಟಾ ಹ್ಯಾರಿಯರ್ & ಸಫಾರಿ:
ಹೊಸ ಹ್ಯಾರಿಯರ್ ಬೆಲೆ ರೂ.1.40 ಲಕ್ಷವರೆಗೆ ಇಳಿಕೆಯಾಗಿದೆ. ಕನಿಷ್ಠ ರೂ.14 ಲಕ್ಷ ಮತ್ತು ಗರಿಷ್ಠ ರೂ.25.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅದೇ ರೀತಿಯಲ್ಲಿ ಸಫಾರಿ ಬೆಲೆಯು ಕೂಡಾ ರೂ.1.45 ಲಕ್ಷವರೆಗೆ ಕಡಿಮೆಯಾಗಿದೆ.

ಇದನ್ನೂ ಓದಿ:Suhana Syed: ಹಿಂದೂ ಯುವಕನ ವರಿಸಲು ಮುಂದಾದ ಸರಿಗಮಪ ಖ್ಯಾತಿಯ ಸುಹಾನ ಸೈಯದ್ !!

You may also like