Home » K S Bhagavan: ಭೈರಪ್ಪ ಹೋಗಿದ್ದಕ್ಕೆ ನನಗೆ ದುಃಖ ಆಗಲಿಲ್ಲ – ಪ್ರೊ. ಕೆ ಎಸ್ ಭಗವಾನ್ ಹೇಳಿಕೆ

K S Bhagavan: ಭೈರಪ್ಪ ಹೋಗಿದ್ದಕ್ಕೆ ನನಗೆ ದುಃಖ ಆಗಲಿಲ್ಲ – ಪ್ರೊ. ಕೆ ಎಸ್ ಭಗವಾನ್ ಹೇಳಿಕೆ

0 comments

K S Bhagavan : ನಾಡಿನ ಹೆಸರಾಂತ ಸಾಹಿತಿ, ಕಾದಂಬರಿಗಳ ನೇತಾರ, ಕನ್ನಡ ಸಾರಸ್ವತ ಲೋಕದ ಬರಹ ಮಾಂತ್ರಿಕ ಎಸ್ ಎಲ್ ಬೈರಪ್ಪನವರು ಇದೀಗ ನಮ್ಮೆಲ್ಲರನ್ನು ಅಗಲಿದ್ದಾರೆ. ತಮ್ಮ ಅಪಾರ ಅಭಿಮಾನಿ ಬಳಗಕ್ಕೆ ವಿದಾಯ ಹೇಳಿ ಹೊರಟಿದ್ದಾರೆ. ತಮ್ಮ ನೆಚ್ಚಿನ ಸಾಹಿತಿಯ ನಿಧನಕ್ಕೆ ನಾಡಿನ ಜನ ಕಂಬನಿ ಮಿಡಿದಿದ್ದಾರೆ. ಆದರೆ ಸಾಹಿತಿ ಪ್ರೊಫೆಸರ್ ಭಗವಾನ್ ಅವರು, ಭೈರಪ್ಪ ಹೋಗಿದ್ದಕ್ಕೆ ನನಗೇನು ದುಃಖ ಆಗಲಿಲ್ಲ ಎಂದು ಹೇಳಿದ್ದಾರೆ.

ಬೈರಪ್ಪನವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ದೊಡ್ಡ ಗಣ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ಇಡೀ ಸಾಹಿತ್ಯ ಲೋಕವೇ ಭೈರಪ್ಪ ಅಗಲಿಕೆಗೆ ಕಂಬನಿ ಮಿಡಿದಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ಎದುರು ಮನೆಯ ಸ್ನೇಹಿತ ಸಾಹಿತಿ ಕೆಎಸ್ ಭಗವಾನ್, ಭೈರಪ್ಪನವರನ್ನು ಕಳೆದುಕೊಂಡಿರುವ ಬಗ್ಗೆ ಸಂತಾಪ ಸೂಚಿಸಿ ಅವರ ಸಾವು ನನಗೆ ದುಃಖ ತರಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:Mukaleppa: ನಾನು ಕೂಡ ಹಿಂದೂ, ನಾನು ಯಾವ ಮತಾಂತರ ಮಾಡಿಲ್ಲ – ಲವ್ ಜಿಹಾದ್ ಕುರಿತು ಮುಕಳೆಪ್ಪ ಫಸ್ಟ್ ರಿಯಾಕ್ಷನ್

ಈ ಕುರಿತಾಗಿ ಮಾತನಾಡಿದ ಭಗವಾನ್ ಅವರು ಅವರು ನೂರು ವರ್ಷ ಬದುಕಬೇಕಿತ್ತು. ಅದು ಆಗಿಲ್ಲ. ಆದರೆ ಬದುಕಿನಷ್ಟು ದಿನದಲ್ಲಿ ಎಲ್ಲಾ ಸಾಧಾನೆ ಮಾಡಿದ್ದಾರೆ, ಹೀಗಾಗಿ ಅವರು ಹೋಗಿದ್ದ ದುಃಖ ಅನ್ನಿಸಲಿಲ್ಲ. ಅವರೆಲ್ಲ ನಮಗೆ ಮಾದರಿಯಾಗಿದ್ದಾರೆ. ಸಾವು ನಿಶ್ಚಿತ. ಅದರಿಂದ ಏನು ಮಾಡುವುದಕ್ಕೆ ಆಗಲ್ಲ ಎಂದು ಸ್ನೇಹಿತನ ಬಗ್ಗೆ ತಮ್ಮ ಭಗವಾನ್ ಮನತುಂಬಿ ಮಾತನಾಡಿದ್ದಾರೆ.

You may also like