Kippi Keerti : ಸೋಶಿಯಲ್ ಮೀಡಿಯಾದಲ್ಲಿ ಕಿತ್ತಿ ಕೀರ್ತಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ತಮ್ಮ ರೀಲ್ಸ್ ಗಳ ಮುಖಾಂತರ ಜನರಿಗೆ ಮನರಂಜನೆ ನೀಡುತ್ತಾ ಆಗಾಗ ಕ್ವಾಟ್ಲೆ ಕೊಡುತ್ತಿರುತ್ತಾರೆ. ಇನ್ನು ಕಿತ್ತು ಕೀರ್ತಿಯ ಪ್ರೇಮ ಪುರಾಣದ ಬಗ್ಗೆ ಹಲವಾರು ಜನರಿಗೆ ಗೊತ್ತಿದೆ. ಆದರೆ ಇದೀಗ ತನ್ನ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಕಿಪ್ಪಿ ಕೀರ್ತಿ ತನ್ನ ಪ್ರಿಯತಮನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ಹೌದು, ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ದಚ್ಚು ಎಂಬಾತನ ವಿರುದ್ಧ ದೂರು ಕಿಪ್ಪಿ ಕೀರ್ತಿ ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಈ ಸಂಬಂಧ ಬ್ಯಾಡಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್ ಸಿ ಆರ್ ದಾಖಲಾಗಿದೆ.
