Garlic: ಬೆಳ್ಳುಳ್ಳಿಯಿಂದ ಆಹಾರದ ರುಚಿ ಹೆಚ್ಚಿಸಲು ಮಾತ್ರವಲ್ಲದೆ ಇತರ ಪ್ರಯೋಜನಗಳಿವೆ. ಇನ್ನು ಬೆಳ್ಳುಳ್ಳಿ (Garlic) ಸಿಪ್ಪೆಗಳು ಸಹ ನಮಗೆ ಅನೇಕ ಆರೋಗ್ಯ (health) ಪ್ರಯೋಜನ ನೀಡುತ್ತೆ.

ಬೆಳ್ಳುಳ್ಳಿ ಸಿಪ್ಪೆಗಳ ಪ್ರಯೋಜನಗಳು:
ಅಸ್ತಮಾ ರೋಗಿಗಳು ಬೆಳ್ಳುಳ್ಳಿ ಸಿಪ್ಪೆ ಸೇವಿಸಿದರೆ ಅಸ್ತಮಾದಿಂದ ಪರಿಹಾರ ಪಡೆಯಬಹುದು. ಇದಕ್ಕಾಗಿ, ಬೆಳ್ಳುಳ್ಳಿ ಸಿಪ್ಪೆಯನ್ನು ಪುಡಿಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ತಿನ್ನಬೇಕು.
ತುರಿಕೆ ಮತ್ತು ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಸಿಪ್ಪೆಗಳನ್ನ ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮತ್ತು ಆ ನೀರನ್ನು ಬಳಸಿ ಪೀಡಿತ ಪ್ರದೇಶಗಳನ್ನ ಸ್ವಚ್ಛಗೊಳಿಸಿ. ಅವು ಚರ್ಮದ ಮೇಲಿನ ತುರಿಕೆ ಮತ್ತು ಕಿರಿಕಿರಿಯಿಂದ ಪರಿಹಾರವನ್ನ ನೀಡುತ್ತವೆ.
ಬೆಳ್ಳುಳ್ಳಿ ಸಿಪ್ಪೆಗಳು ಪಾದಗಳಲ್ಲಿನ ಊತ ಮತ್ತು ನೋವನ್ನ ನಿವಾರಿಸುತ್ತದೆ.
ಇದನ್ನೂ ಓದಿ;Beauty Tips: ವಯಸ್ಸಿಗೆ ತಕ್ಕನಾಗಿ ಪುರುಷರ ಹಾಗೂ ಮಹಿಳೆಯರ ವೇಯ್ಟ್ ಎಷ್ಟಿರಬೇಕು?
ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಅವು ತಣ್ಣಗಾದ ನಂತರ, ಅವುಗಳನ್ನು ನಿಮ್ಮ ಕೂದಲಿಗೆ ಚೆನ್ನಾಗಿ ಹಚ್ಚಿ. ನಂತರ ನಿಮ್ಮ ನೆತ್ತಿಯನ್ನ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಮತ್ತು ತುರಿಕೆ ಕೂದಲಿನ ಬೇರುಗಳಿಂದ ಪರಿಹಾರ ಸಿಗುತ್ತದೆ.
