Health Tip: ಜೀರಿಗೆ ಸಾಂಬಾರು ಮಾಡಲು ಮಸಾಲೆಯಾಗಿ ಬಳಸುವುದು ಮಾತ್ರವಲ್ಲ. ಜೀರಿಗೆ ನೀರು ಆರೋಗ್ಯ ಕಾಪಾಡುವಲ್ಲಿ ಎತ್ತಿದ ಕೈ. ಮುಖ್ಯವಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಅದಕ್ಕೂ ಮೊದಲು ಜೀರಿಗೆ ನೀರು ತಯಾರಿಸುವ ವಿಧಾನ (health tips) ಇಲ್ಲಿ ತಿಳಿಸಲಾಗಿದೆ.

ಜೀರಿಗೆ ನೀರು ತಯಾರಿಸುವ ವಿಧಾನ:
ಒಂದು ಲೋಟ ನೀರಿನಲ್ಲಿ(water) ಒಂದು ಚಮಚ ಜೀರಿಗೆ ಸೇರಿಸಿ ರಾತ್ರಿಯಿಡಿ ನೆನೆಸಿಡಿ. ನಂತರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೋಸಿ ಕುಡಿಯಿರಿ. ಬೇಕಿದ್ದರೆ, ಜೀರಿಗೆಯನ್ನು ನೆನೆಸದೆ, ನೀರಿನಲ್ಲಿ ಚೆನ್ನಾಗಿ ಕುದಿಸಿ ನಂತರ ತಣ್ಣಗಾದ ಮೇಲೆ ಕುಡಿಯಬಹುದು. ಹೀಗೆ ಎರಡು ವಿಧಾನದಲ್ಲಿ ಜೀರಿಗೆ ನೀರು ಮಾಡಿಕೊಳ್ಳಬಹುದು.
ಜೀರಿಗೆ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನ:
ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ.
ಇದು ಗ್ಯಾಸ್, ಎದೆಯುರಿ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಜೀರಿಗೆ ನೀರು ತೂಕ ಇಳಿಕೆಗೆ ಉತ್ತಮ ಮನೆಮದ್ದು.
ಜೀರಿಗೆ ನೀರು ದೇಹದಿಂದ ವಿಷಕಾರಿ ಅಂಶಗಳನ್ನು (ಟಾಕ್ಸಿನ್ಸ್) ಹೊರಹಾಕಲು ನೆರವಾಗುತ್ತದೆ. ಮೂತ್ರಪಿಂಡ ಮತ್ತು ಪಿತ್ತಜನಕಾಂಗದ (ಲಿವರ್) ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಜೀರಿಗೆ ನೀರು ಕುಡಿಯುವುದರಿಂದ ಚರ್ಮವು ಸಹ ಕಾಂತಿಯುತವಾಗಿರುತ್ತದೆ.
ಜೀರಿಗೆಯಲ್ಲಿ ಪೊಟ್ಯಾಸಿಯಮ್ ಅಂಶ ಇರುವುದರಿಂದ ಇದು ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು (ಇಮ್ಯೂನಿಟಿ) ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀರಿಗೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (ಬ್ಲಡ್ ಶುಗರ್) ನಿಯಂತ್ರಿಸಲು ಸಹಾಯ(help) ಮಾಡುತ್ತದೆ.
