Home » Rohith Sharma: ಏಕದಿನ ಪಂದ್ಯ – ರೋಹಿತ್ ಶರ್ಮ ಕೈ ತಪ್ಪಿದ ಕ್ಯಾಪ್ಟನ್ ಪಟ್ಟ, ಕಾರಣ ಬಹಿರಂಗ!!

Rohith Sharma: ಏಕದಿನ ಪಂದ್ಯ – ರೋಹಿತ್ ಶರ್ಮ ಕೈ ತಪ್ಪಿದ ಕ್ಯಾಪ್ಟನ್ ಪಟ್ಟ, ಕಾರಣ ಬಹಿರಂಗ!!

0 comments

Rohith Sharma : ಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ಮೂಲಕ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಏಕಾಏಕಿ ಯಾರೂ ಸಹ ಊಹಿಸಿರದ ಶಾಕ್‌ ನೀಡಿದ್ದು, ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಹೊರಗಡಲಾಗಿದೆ. ಇದಕ್ಕೆ ರೀಸನ್ ಕೂಡ ಇದೀಗ ರಿವಿಲ್ ಆಗಿದೆ.

ಹೌದು, ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಮಾತ್ರ ರೋಹಿತ್ ಶರ್ಮಾ ಅವರನ್ನು ನಾಯಕನ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಯೋಚನೆ ಮಾಡಿಲ್ಲ. ಬದಲಾಗಿ ಟೆಸ್ಟ್ ತಂಡಗಳಲ್ಲಿ ಈಗಾಗಲೇ ತಂಡವನ್ನು ಮುನ್ನಡೆಸುತ್ತಿರುವ ಶುಭಮನ್ ಗಿಲ್ ಅವರಿಗೆ ನಾಯಕತ್ವವನ್ನು ಒಪ್ಪಿಸಲಾಗಿದೆ.

ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಲು ಆಯ್ಕೆದಾರರು ನೀಡಿದ ಕಾರಣವು ನಿಜವಾದ ಕಾರಣಕ್ಕಿಂತ ಭಿನ್ನವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಂಡದ ವಾತಾವರಣ ಹದಗೆಡಲು ಬಯಸದ ಕಾರಣ ರೋಹಿತ್ ಅವರನ್ನು ನಾಯಕತ್ವದಿಂದ ತಗೆದುಹಾಕಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಟೈಮ್ಸ್ ಆಫ್ ಇಂಡಿಯಾ (TOI) ವರದಿಯ ಪ್ರಕಾರ, ಆಯ್ಕೆದಾರರು ರೋಹಿತ್ ನಾಯಕತ್ವದಿಂದ ವಿಶ್ವಕಪ್‌ ವೇಳೆಗೆ ತಂಡದ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳುತ್ತಿದ್ದು, ರೋಹಿತ್ ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ನಿರ್ದೇಶಿಸುವುದನ್ನು ಆಯ್ಕೆದಾರರು ಬಯಸಲಿಲ್ಲ, ಏಕೆಂದರೆ ಅದು ತಂಡದ ಸಂಸ್ಕೃತಿಯ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದೆಂದು ಅವರು ಭಯಪಟ್ಟಿದ್ದರಂತೆ.

ಇದನ್ನೂ ಓದಿ:Kerala: ಅಪರೂಪಕ್ಕೆ ಟಿಕೆಟ್ ಖರೀದಿಸಿ 25 ಕೋಟಿ ಲಾಟರಿ ಗೆದ್ದ ವ್ಯಕ್ತಿ!!

ನಾಯಕತ್ವದ ಪಾತ್ರದಲ್ಲಿ ರೋಹಿತ್ ಅವರಂತಹ ಆಟಗಾರನಿದ್ದಿದ್ದರೆ, ರೋಹಿತ್‌ ಡ್ರೆಸ್ಸಿಂಗ್ ಕೋಣೆಯಲ್ಲಿ ತಂಡದ ಸಂಸ್ಕೃತಿಯ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದು. ಅಲ್ಲದೇ ರೋಹಿತ್‌ ಶರ್ಮಾ ಅತ್ಯಂತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದರಿಂದ, ಅದು ತಂಡದ ಸಂಸ್ಕೃತಿಯನ್ನು ಕದಡಬಹುದಿತ್ತು ಎಂದು ಬಿಸಿಸಿಐ ಮೂಲವೊಂದು ಹೇಳಿರುವುದಾಗಿ ವರದಿಯಾಗಿದೆ.

You may also like