GOLD Rate: ಬುಧವಾರ ಚಿನ್ನದ ಬೆಲೆ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಹಳದಿ ಲೋಹವು ಮೊದಲ ಬಾರಿಗೆ ₹1.22 ಲಕ್ಷ/10 ಗ್ರಾಂನ ಗಡಿಯನ್ನು ದಾಟಿದೆ. MCX ಚಿನ್ನದ ಪ್ಯೂಚರ್‌ಗಳು ₹1,22,735/10 ಗ್ರಾಂನ ಗರಿಷ್ಠ ಮಟ್ಟವನ್ನು ತಲುಪಿವೆ. ವಿಶ್ವ ಚಿನ್ನದ ಮಂಡಳಿಯ ದತ್ತಾಂಶದ ಪ್ರಕಾರ, ಮಂಗಳವಾರ ಮೊದಲ ಬಾರಿಗೆ ಚಿನ್ನದ ಸ್ಪಾಟ್ ಬೆಲೆಗಳು $4,000 (ಸುಮಾರು ₹3.55 ಲಕ್ಷ)/ಔನ್ಸ್‌ಗೆ ತಲುಪಿವೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಈ ವರ್ಷ ಚಿನ್ನದ ಬೆಲೆಗಳು ಶೇ.60ಕ್ಕಿಂತ ಹೆಚ್ಚು ಏರಿಕೆಯಾಗಿವೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಇದು ಹಣಕಾಸು ನೀತಿಯಲ್ಲಿನ ಆಳವಾದ ಜಾಗತಿಕ ಬದಲಾವಣೆ, ಕರೆನ್ಸಿಯ ಏರಿಳಿತ, ಅಪಾಯದ ಭಾವನೆಯ ಪರಿಣಾಮವಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಮಧ್ಯಪ್ರಾಚ್ಯದಲ್ಲಿನ ಅಶಾಂತಿ ಸೇರಿದಂತೆ ನಿರಂತರ ಜಾಗತಿಕ ಉದ್ವಿಗ್ನತೆಗಳು ಹೂಡಿಕೆದಾರರನ್ನು ಚಿನ್ನದತ್ತ ಮುಖ ಮಾಡುವಂತೆ ಮಾಡಿದೆ. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1.22 ಲಕ್ಷಕ್ಕೆ ತಲುಪಿದೆ.
ಚಿನ್ನದ ಬೆಲೆಯಲ್ಲಿನ ತ್ವರಿತ ಏರಿಕೆಯ ಹಿಂದೆ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧವೇನು?
ಜಾಗತಿಕವಾಗಿ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿನ ಗಮನಾರ್ಹ ಏರಿಕೆಗೆ ಅಮೆರಿಕ-ಚೀನಾ ಸಂಘರ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ವಿಶ್ಲೇಷಕರ ಪ್ರಕಾರ, ಚೀನಾದ ಕೇಂದ್ರ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲುಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಸತತ 11ನೇ ತಿಂಗಳು ಚಿನ್ನವನ್ನು ಖರೀದಿಸುತ್ತಿದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯೂ ಬೆಲೆಗಳನ್ನು ಬೆಂಬಲಿಸುತ್ತಿದೆ.
