7
RSS: ಆರ್‌ಎಸ್‌ಎಸ್ ಕಾರ್ಯಕರ್ತನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಡೆತ್‌ನೋಟು ಬರೆದಿದ್ದು, ಟೆಕ್ಕಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. RSS ಕ್ಯಾಂಪ್‌ನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಡೆತ್‌ನೋಟಲ್ಲಿ ಬರೆಯಲಾಗಿದೆ.
ಯುವಕ ಲಾಡ್ಜ್‌ನಲ್ಲಿ ಸುಸೈಡ್ ಮಾಡಿಕೊಂಡಿದ್ದು, ನಾನು ಸುಮಾರು ವರ್ಷದಿಂದ ಆರ್‌ಎಸ್‌ಎಸ್ ಕಾರ್ಯಕರ್ತನ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ. ಇದರಿಂದ ನಾನು ಮನನೊಂದು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಡೆತ್‌ನೋಟಲ್ಲಿ ಯುವಕ ಬರೆದಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ಘಟನೆಯ ಕುರಿತು ಸತ್ಯಾನುಸತ್ಯತೆ ಕುರಿತು ಮಾಹಿತಿ ಇನ್ನಷ್ಟೇ ದೊರಕಬೇಕಿದೆ.
ಇದನ್ನೂ ಓದಿ:H D Revanna: ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಹೆಚ್.ಡಿ.ರೇವಣ್ಣ ಕಾರು ತಡೆದ ಕಂದಾಯ ಇಲಾಖೆ ಅಧಿಕಾರಿಗಳು
