Home » ವಿವಾಹವಾಗಲು ನಿರಾಕರಿಸಿದ ನೆಂಬ ಕಾರಣಕ್ಕೆ ಯುವಕನ ಮೇಲೆ ಆಸಿಡ್ ಎರಚಿದ ಮಹಿಳೆ. ಯುವಕನ ಸ್ಥಿತಿ ಗಂಭೀರ.

ವಿವಾಹವಾಗಲು ನಿರಾಕರಿಸಿದ ನೆಂಬ ಕಾರಣಕ್ಕೆ ಯುವಕನ ಮೇಲೆ ಆಸಿಡ್ ಎರಚಿದ ಮಹಿಳೆ. ಯುವಕನ ಸ್ಥಿತಿ ಗಂಭೀರ.

0 comments

ತಿರುವನಂತಪುರ ದಲ್ಲಿ ತನ್ನನ್ನು ವಿವಾಹವಾಗಲು ತನ್ನ ಪ್ರಿಯಕರ ನಿರಾಕರಿಸಿದ ನೆಂಬ ಕಾರಣಕ್ಕಾಗಿ ಮಹಿಳೆಯೋರ್ವರು ಆತನ ಮೇಲೆ ಆಸಿಡ್ ಎರಚಿರುವ ಘಟನೆ ಕೇರಳದ ಇಡಕ್ಕಿ ಜಿಲ್ಲೆಯ ಆದಿ ಮಾಲಿ ಎಂಬಲ್ಲಿ ನಡೆದಿದೆ.

35 ವರ್ಷದ ಮಹಿಳೆ ಶೀಬಾ 27 ವರ್ಷದ ಅರುಣ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದಳು. ಮೊದಲು ಇವರಿಬ್ಬರ ನಡುವೆ ಸ್ನೇಹ ವಾಗಿದ್ದು, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ಕೆಲ ಸಮಯದ ನಂತರ ಅರುಣ್ ಗೆ ಶೀಬಾ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಅರುಣ್ ಬೇರೆ ಮದುವೆಯಾಗಲು ನಿರ್ಧರಿಸಿದ್ದ. ಇದರಿಂದ ಕೋಪಗೊಂಡ ಶ್ರೀ ಬಾ ಅರುಣ್ ಮೇಲೆ ಆಸಿಡ್ ಎರಚಿ ದಾಳಿ ನಡೆಸಿದ್ದಾಳೆ.

ಘಟನೆಯಿಂದ ಗಾಯಗೊಂಡ ಅರುಣ್ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಶೀಬಾ ಅವರ ಮುಖ ಮತ್ತು ಕೈಗಳಿಗೂ ಗಂಭೀರ ಗಾಯಗಳಾಗಿವೆ. ಈ ಘಟನೆಯ ಬಳಿಕ ಶೀಬಾಳನ್ನು ಆದಿ ಮಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

You may also like

Leave a Comment