Home » ಮಂಗಳೂರು : ಪತ್ರಕರ್ತ ಸುಖ್‌ಪಾಲ್ ಪೊಳಲಿ ಕೊಲೆಯತ್ನ ,ಆರೋಪಿಯ ಬಂಧನ

ಮಂಗಳೂರು : ಪತ್ರಕರ್ತ ಸುಖ್‌ಪಾಲ್ ಪೊಳಲಿ ಕೊಲೆಯತ್ನ ,ಆರೋಪಿಯ ಬಂಧನ

by Praveen Chennavara
0 comments

ಮಂಗಳೂರು : ಖಾಸಗಿ ಟಿವಿ ವಾಹಿನಿ ವರದಿಗಾರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಖಾಸಗಿ ಟಿವಿ ವರದಿಗಾರರಾಗಿರುವ ಸುಖ್ ಪಾಲ್ ಪೊಳಲಿ ಅವರ ಮೇಲೆ ಯದುನಂದನ್ ಎನ್ನುವವರು ಸೋಮವಾರ ಸಂಜೆ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಲೆಗೆ ಪೆಟ್ಟು ಬಿದ್ದ ಸುಖ್ ಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಯದುನಂದನ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಖಂಡನೆ
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ,ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರರಾಗಿರುವ ಸುಖಪಾಲ್ ಪೊಳಲಿ ಅವರ ಮೇಲೆ ಕಳೆದ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ .ಓರ್ವ ಆರೋಪಿಯನ್ನು ಬಂಧಿಸಲಾಗಿದೆ .ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರನ್ನು ಇಂದು ಮಧ್ಯಾಹ್ನ 1.30 ಗಂಟೆಗೆ ಅವರ ಕಛೇರಿಯಲ್ಲಿ ಭೇಟಿ ಮಾಡಿ ತಪ್ಪಿತಸ್ತತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಹಾಗೂ ಘಟನೆಯನ್ನು ಖಂಡಿಸಲಾಗುವುದು ಎಂದು ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.

You may also like

Leave a Comment