ಸವಣೂರು : ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ ಯು ಚೆನ್ನಾವರ ಎಸ್ ವೈಎಸ್ ಎಸ್ಸೆಸ್ಸೆಫ್ ವತಿಯಿಂದ ಚೆನ್ನಾವರ ಮಸೀದಿ ಬಳಿ ನಡೆಯಿತು.
ಬೆಳ್ಳಾರೆ ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಇದರ ಅಧ್ಯಕ್ಷರೂ, ಆಧ್ಯಾತ್ಮಿಕ ನಾಯಕರೂ ಆಗಿರುವ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ರವರು ದುಆಶೀರ್ವಚನದೊಂದಿಗೆ ಮುಖ್ಯ ಪ್ರಭಾಷಣ ನಡೆಸಿದರು.
ಸ್ಥಾಪಕಾಧ್ಯಕ್ಷ ಅಬ್ದುಲ್ ಕರೀಂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಿಪಿ ಅಬೂಬಕರ್ ಮದನಿ ಉದ್ಘಾಟಿಸಿ ಮಾತನಾಡಿದರು.
ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಅನುಸ್ಮರಣಾ ಭಾಷಣ ನಡೆಸಿದರು. ಎಸ್ಸೆಸ್ಸೆಫ್ ಮೇಲಘಕದ ಸುತ್ತೋಲೆಯಂತೆ ಮಝ್ ಬೂತ್ -21 ಕಾರ್ಯಕ್ರಮವು ಪ್ರಸ್ತುತ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿಪಿ ಮುಹಮ್ಮದ್ ಹಾಜಿ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಸಾಲಿ ಬೆಳ್ಳಾರೆ, ಕೆಸಿಎಫ್ ಬಹ್ರೈನ್ ಸಫ ಸೆಕ್ಟರ್ ಅಧ್ಯಕ್ಷ ಆಲಿಕುಂಞಿ ಹಾಜಿ, ಎಸ್ ವೈ ಎಸ್ ಕುಂಬ್ರ ಸೆಂಟರ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ, ಯೂಸುಫ್ ಹಾಜಿ, ಎಸ್ ವೈಎಸ್ ಅಧ್ಯಕ್ಷ ಇಸ್ಮಾಯಿಲ್ ಸಅದಿ, ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯಿಲ್ ಹನೀಫಿ, ಅಬ್ದುರ್ರಹ್ಮಾನ್ ಬಿ, ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ನಾಯಕರಾದ ಇಸ್ಹಾಕ್ ಮಾಡಾವು, ಇರ್ಷಾದ್ ಗಟ್ಟಮನೆ, ರಫೀಕ್ ಪಾರಾಡ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ ವೈಎಸ್ ಕಾರ್ಯದರ್ಶಿ ಯಹ್ಯಾ ಮುಸ್ಲಿಯಾರ್ ಸ್ವಾಗತಿಸಿ, ಎಸ್ಸೆಸ್ಸೆಫ್ ಕಾರ್ಯದರ್ಶಿ ಆಸಿಫ್ ಪಿಎಮ್ ವಂದಿಸಿದರು.
