Home » ಪುತ್ತೂರು : ಕಾಲೇಜಿನಲ್ಲಿ ಲವ್‌ಜೆಹಾದ್ ಷಡ್ಯಂತ್ರ -ಕ್ರಮಕ್ಕೆ ಹಿಂ.ಜಾ.ವೇ ಒತ್ತಾಯ

ಪುತ್ತೂರು : ಕಾಲೇಜಿನಲ್ಲಿ ಲವ್‌ಜೆಹಾದ್ ಷಡ್ಯಂತ್ರ -ಕ್ರಮಕ್ಕೆ ಹಿಂ.ಜಾ.ವೇ ಒತ್ತಾಯ

by Praveen Chennavara
0 comments

ಪುತ್ತೂರು: ಸರಕಾರಿ ಕಾಲೇಜಿನಲ್ಲಿ ಕೆಲವು ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಲವ್ ಜಿಹಾದ್ ನ ಪ್ರಯತ್ನ ಮಾಡುತ್ತಿದ್ದು, ಅಷ್ಟೇ ಅಲ್ಲದೇ ಹಿಂದೂ ಯುವತಿಯರಿಗೆ ಗೇಲಿ ಮಾಡುತ್ತಿದ್ದು, ರೇಗಿಸುತ್ತಿದ್ದು, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಅಲ್ಲಿನ ಸಿಎಫ್ ಐ ವಿದ್ಯಾರ್ಥಿಗಳು ಮತ್ತು ಹೊರಗಡೆಯಿಂದ ಕೆಎಫ್ ಡಿ ಮತ್ತು ಸಿಎಫ್ ಐ ಕಾರ್ಯಕರ್ತರು ಬಂದು ಹಲ್ಲೆ ನಡೆಸಿದ್ದಾರೆ ಇದನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು ಇದರ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.

ಪೊಲೀಸ್ ಇಲಾಖೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅವರನ್ನು ಶೀಘ್ರವಾಗಿ ಬಂಧಿಸಬೇಕು, ಬಂಧಿಸದಿದ್ದರೇ ಎಲ್ಲಾ ಹಿಂದೂ ಸಮಾಜವನ್ನು ಒಟ್ಟಾಗಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸಲಾಗುವುದು, ಅಷ್ಟೇ ಅಲ್ಲದೇ ಬಸ್ ನಿಲ್ದಾಣದ ಬಳಿ ಗುಂಪುಗೂಡಿ ಹಿಂದೂ ಸಂಘಟನೆ ಮುಖಂಡರ ಬಗ್ಗೆ ನಿಂದಿಸಿದ್ದಾರೆ, ಅವರಿಗೆ ಜೀವಬೆದರಿಕೆ ಹಾಕಿದ್ದಾರೆ ಅವರ ವಿರುದ್ಧ ಕೂಡ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರ ಉಪಾಧ್ಯಕ್ಷ ಗಿತೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment