Home » ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಂತೆ ವೈದ್ಯನಿಗೂ ಹೃದಯಾಘಾತ | ಇಬ್ಬರನ್ನೂ ದುರದೃಷ್ಟ ಕಾಡಿತ್ತು!!

ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಂತೆ ವೈದ್ಯನಿಗೂ ಹೃದಯಾಘಾತ | ಇಬ್ಬರನ್ನೂ ದುರದೃಷ್ಟ ಕಾಡಿತ್ತು!!

0 comments

ಹೈದರಾಬಾದ್: ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ
ನೀಡುತ್ತಿದ್ದಾಗಲೇ ವೈದ್ಯನಿಗೂ ಹೃದಯಾಘಾತವಾದ ಅನಿರೀಕ್ಷಿತ ಘಟನೆ ನಡೆದಿದೆ. ದುರದೃಷ್ಟವಶಾತ್ ಇಬ್ಬರೂ
ಮೃತಪಟ್ಟ ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ
ನಡೆದಿದೆ.

ತೆಲಂಗಾಣದ ಗಾಂಧಾರಿ ಮಂಡಲ ವ್ಯಪತಿಯ ಸರ್ಜು ಎಂಬ
ವ್ಯಕ್ತಿಗೆ ಇಂದು ಭಾನುವಾರ ಬೆಳಗ್ಗೆ ಹೃದಯಾಘಾತವಾಗಿದೆ. ಕೂಡಲೇ ಕುಟುಂಬದವರು ಗಾಂಧಾರಿ ಮಂಡಲ ಪ್ರದೇಶದ ಖಾಸಗಿ ನರ್ಸಿಂಗ್ ಹೋಂಗೆ ರೋಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ತಜ್ಞ ವೈದ್ಯ ಡಾ. ಲಕ್ಷ್ಮಣ್ ಅವರು ರೋಗಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ಸಂದರ್ಭದಲ್ಲಿ ವೈದ್ಯರಿಗೂ ಎದೆ ನೋವು ಕಾಣಿಸಿಕೊಂಡಿದೆ. ಅವರು ಕೂಡ ಅಲ್ಲೇ
ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ವೈದ್ಯ ಮೃತಪಟ್ಟಿದ್ದರಿಂದ ಕುಟುಂಬದವರು ಬೇರೆ ದಾರಿ ಕಾಣದೆ ಕೂಡಲೇ ಸರ್ಜುನನ್ನುಕಾಮಾರೆಡ್ಡಿ ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಿದ್ದಾರೆ. ಆದರೆ ಮಾರ್ಗಮಧ್ಯೆ ಆತನೂ ಮೃತಪಟ್ಟಿದ್ದಾರೆ.

ಮೆಹಬೂಬಾಬಾದ್ ನ ಡಾಕ್ಟರ್ ಲಕ್ಷ್ಮಣ್ ನಿಜಾಮಾಬಾದ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಗಾಂಧಾರಿ ಮಂಡಲದಲ್ಲಿ ಖಾಸಗಿ ಆಸ್ಪತ್ರೆ ನಿರ್ವಹಿಸುತ್ತಿದ್ದರು.

You may also like

Leave a Comment