Home » ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ

by Praveen Chennavara
0 comments

ಕಡಬ :ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಹಾಡುಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ.

ಸಿರಿಬಾಗಿಲಿನ ಬಾರ್ಯ ಎಂಬ ಪ್ರದೇಶಕ್ಕೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆಯನ್ನು ಓಡಿಸುವ ಸಲುವಾಗಿ ಸಿಡಿಸಿದರೂ ತೋಟದಿಂದ ಹೋಗಿಲ್ಲ ಎಂದು ಕೃಷಿಕರು ವಿವರಿಸಿದ್ದಾರೆ.

ಸಿರಿಬಾಗಿಲಿನ ಜನಾರ್ಧನ ಬಾರ್ಯ,ಬಾಲಕೃಷ್ಣ ಗೌಡ, ಐತಪ್ಪ ಗೌಡ,ದೇವರಾಜ ಗೌಡ ,ಅಣ್ಣಪ್ಪ ಗೌಡ ಎಂಬವರ ತೋಟಕ್ಕೆ ಕಾಡಾನೆ ನುಗ್ಗಿದೆ..

ಈ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ ದಾಳಿ ಮಾಡುತ್ತಿದ್ದು ಕೂಡಲೇ ಕೃಷಿಕರ ರಕ್ಷಣೆ ಮಾಡಿ ಸೂಕ್ತ ಪರಿಹಾರ ಹಾಗೂ ಶಾಶ್ವತ ತಡೆಗೋಡೆ ವ್ಯವಸ್ಥೆ ಮಾಡುವಂತೆ ಕೃಷಿಕರು ಒತ್ತಾಯ ಕೇಳಿಬಂದಿದೆ.

You may also like

Leave a Comment