Home » ಪುತ್ತೂರು : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 7 ತಿಂಗಳ ಮಗುವಿನ ತಾಯಿ

ಪುತ್ತೂರು : ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 7 ತಿಂಗಳ ಮಗುವಿನ ತಾಯಿ

by Praveen Chennavara
0 comments

ಪುತ್ತೂರು, ಡಿ 2: ವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ದಾರಂದಕ್ಕುಕ್ಕು ಎಂಬಲ್ಲಿಡಿ.2 ರಂದು ಮಧ್ಯಾಹ್ನ ನಡೆದಿದೆ.

ದಾರಂದಕ್ಕುಕ್ಕು ನಿವಾಸಿ ಹಾಗು ಪುತ್ತೂರಿನ ಕಾಮತ್ ಸ್ವೀಟ್ಸ್ ನಲ್ಲಿ ಉದ್ಯೋಗದಲ್ಲಿರುವ ಭಾಸ್ಕರ್ ಪ್ರಭು ರವರ ಪತ್ನಿ ಆಶಿಕಾ(20) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಮೃತರು ಪತಿ, 7 ತಿಂಗಳ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಈಕೆಯ ವಿವಾಹವೂ ಸುಮಾರು ಎರಡು ವರ್ಷ ಹಿಂದೆ ನಡದಿತ್ತು. ಆಶಿಕಾರವರು ಚಿಕ್ಕ ವಯಸ್ಸಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ವಿವಾಹದ ಬಳಿಕವೂ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

You may also like

Leave a Comment