Home » ಉಪ್ಪಿನಂಗಡಿ:ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

ಉಪ್ಪಿನಂಗಡಿ:ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

0 comments

ಉಪ್ಪಿನಂಗಡಿ: ನಾಲ್ಕು ದಿನಗಳ ಹಿಂದೆ ಬೊಳ್ಳಾರು ನೇತ್ರಾವತಿ ನದಿ ನೀರಿನಲ್ಲಿ ಸ್ನಾನ ಮಾಡುವ ವೇಳೆ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ನದಿ ದಡದಲ್ಲಿ ಪತ್ತೆಯಾಗಿದೆ.

ನದಿಗೆ ಒಟ್ಟು ಐದು ಮಂದಿ ಸ್ನಾನಕ್ಕೆ ಇಳಿದಿದ್ದು ಐವರ ಪೈಕಿ ಛತ್ತಿಸ್ ಘಡ್ ನ ಸುಕ್ಕೊ ರಾಮ್ ಗಡ್ಡೆ (21 ವ) ರವರು ಕಣ್ಮರೆಯಾಗಿದ್ದರು.ಇದೀಗ ಮೃತ ದೇಹ ಪೆರ್ನೆ ಸಮೀಪ ಬಿಳಿಯೂರು ನದಿ ದಡದಲ್ಲಿ ಪತ್ತೆಯಾಗಿದೆ.

ಈ ಯುವಕ ಸ್ವರ್ಣ ಭೂಮಿ ಬೋರ್ ವೆಲ್ ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.ನದಿ ನೀರಿನಲ್ಲಿ ಸ್ನಾನ ಮಾಡುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ತೆರಳಿ ಕಾರ್ಯಾಚರಣೆ ನಡೆಸಿದ್ದು, ಇದೀಗ ಕಾರ್ಯ ಯಶಸ್ವಿಯಾಗಿದೆ.

You may also like

Leave a Comment