Home » ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರ ಹತ್ಯೆಗೈದ ವೈದ್ಯ.

ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರ ಹತ್ಯೆಗೈದ ವೈದ್ಯ.

0 comments

ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರ ಹತ್ಯೆಗೈದ ವೈದ್ಯ.

ವೈದ್ಯರೊಬ್ಬರು ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಕಾನ್ಪುರದ ಕಲ್ಯಾಣಪುರದಲ್ಲಿ ನಡೆದಿದೆ.

ಖಾಸಗಿ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾಕ್ಟರ್ ಸುಶೀಲ್ ಕುಮಾರ್ ಈ ಕೃತ್ಯವನ್ನು ಎಸಗಿದ್ದಾರೆ.

ಪತ್ನಿ ಚಂದ್ರಪ್ರಭಾ (48), ಮಗ ಶಿಖರ್ ಸಿಂಗ್ (18), ಮಗಳು ಖುಷಿ ಸಿಂಗ್ ಕೊಲೆಯಾಗಿದ್ದಾರೆ.

ಕೊಲೆಯ ಬಳಿಕ ತನ್ನ ಸಹೋದರ ಸುನಿಲ್ ಗೆ ವಾಟ್ಸಪ್ ಸಂದೇಶ ಕಳಿಸಿದ್ದು ತಾನು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದು, ಕೋವಿಡ್ -19 ಯಾರನ್ನು ಉಳಿಸುವುದಿಲ್ಲ ಅದಕ್ಕಾಗಿ ತನ್ನ ಹೆಂಡತಿ ಮಕ್ಕಳನ್ನು ಕೋವಿಡ್ ನಿಂದ ಮುಕ್ತಗೊಳಿಸಲು ಅವರನ್ನು ಹತ್ಯೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ತಾನು ಕೂಡ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದು ಮುಂದೆ ತನ್ನ ಸಂಸಾರವನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ನನ್ನ ಯೋಚಿಸಿ ಈ ರೀತಿಯ ಹತ್ಯೆ ಮಾಡಿದ್ದಾನೆ.

ಹತ್ಯೆ ನಂತರ ಆತ ಪರಾರಿಯಾಗಿದ್ದಾನೆ. ಆತನ ಸಹೋದರ ಸುನಿಲ್ ಮನೆಯ ಬಳಿ ಬಂದು ಪರಿಶೀಲಿಸಿದಾಗ ಕೊಲೆಯಾಗಿರುವುದು ಬಹಿರಂಗವಾಗಿದೆ. ಸ್ಥಳಕ್ಕೆ ಪೊಲೀಸರು ಬಂದು ತನಿಖೆ ನಡೆಸಿದ್ದಾರೆ.

You may also like

Leave a Comment