Home » ಸೈಕಲ್‌ಗೆ ಕಾರು ಢಿಕ್ಕಿ : ಸೈಕಲ್ ಸವಾರ ಮೃತ್ಯು

ಸೈಕಲ್‌ಗೆ ಕಾರು ಢಿಕ್ಕಿ : ಸೈಕಲ್ ಸವಾರ ಮೃತ್ಯು

by Praveen Chennavara
0 comments

ಉಡುಪಿ : ಸೈಕಲ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಕಟಪಾಡಿ ಸಮೀಪದ ಬಿಸ್ಮಿಲ್ಲಾ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.10ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಮೂಡಬೆಟ್ಟು ಪೊಸಾರು ನಿವಾಸಿ ರಾಜೇಂದ್ರ ಕಾಮತ್(56) ಎಂದು ಗುರುತಿಸಲಾಗಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಎದುರಿನಲ್ಲಿದ್ದ ಸೈಕಲ್‌ಗೆ ಢಿಕ್ಕಿಯಾಗಿ ಸೈಕಲ್ ಸವಾರ ರಾಜೇಂದ್ರ ಕಾಮತ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.
ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment