Home » ಕೇರಳ : ಗೋಮಾಂಸ ಸೇವಿಸಿದ 24 ಯುವಕರಿಗೆ ಸಾಮಾಜಿಕ ಬಹಿಷ್ಕಾರ

ಕೇರಳ : ಗೋಮಾಂಸ ಸೇವಿಸಿದ 24 ಯುವಕರಿಗೆ ಸಾಮಾಜಿಕ ಬಹಿಷ್ಕಾರ

by Praveen Chennavara
0 comments

ಕೇರಳ‌: ಗೋಮಾಂಸ ಸೇವಿಸಿದ 24 ಬುಡಕಟ್ಟು ಜನಾಂಗದ ಯುವಕರಿಗೆ ಸಾಮಾಜಿಕ ಬಹಿಷ್ಕಾರ ಹೇರಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಗೋಮಾಂಸ ಸೇವನೆ ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಮೂಲಕ ಶತಮಾನದ ತಮ್ಮ ಪದ್ಧತಿ, ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಬುಡಕಟ್ಟು ಜನಾಂಗದ ಪುರುಷರಿಗೆ ಆ ಜನಾಂಗದ ಉರುಕ್ಕೋಟಮ್(ಬುಡಕಟ್ಟು ಜನಾಂಗದ ಪರಿಷತ್ತು) ಸಾಮಾಜಿಕ ಬಹಿಷ್ಕಾರ ಹೇರಿದೆ.

ಬಹಿಷ್ಕಾರಗೊಂಡ ಪುರುಷರು ಅರಣ್ಯದ ನಿರ್ಜನ ಪ್ರದೇಶಕ್ಕೆ ತೆರಳಬೇಕು. ಅವರ ಪತ್ನಿ, ಸಂಬಂಧಿಗಳು, ಮಕ್ಕಳು, ತಂದೆ,ತಾಯಿ ಸೇರಿ ಯಾರೂ ಅವರನ್ನು ಸಂಪರ್ಕಿಸಬಾರದು ಎಂದು ಉರುಕ್ಕೂಟಮ್ ಆದೇಶಿಸಿದೆ.

ಈ ಕುರಿತು ಯಾವುದೇ ದೂರು ಬಂದಿಲ್ಲ. ಆದರೆ ವಿವಿಧ ಕಡೆಗಳಿಂದ ದೊರೆತ ಮಾಹಿತಿಯನ್ನು ಆಧರಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You may also like

Leave a Comment