ವರ್ಕ್ ಫ್ರಮ್ ಹೋಂ ನಲ್ಲಿ ಕೆಲಸ ಮಾಡುತ್ತಿದ್ದಾಗ ಅಚಾನಕ್ಕಾಗಿ ಹಾಸಿಗೆಯಿಂದ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದುಕ್ಕೊಂಡ ಉದ್ಯೋಗಿಯ ಬೆನ್ನಿಗೆ ಜರ್ಮನಿ ಕೋರ್ಟ್ ನಿಂತಿದೆ. ಅಲ್ಲದೆ ಅದಕ್ಕೆ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಜರ್ಮನಿಯಲ್ಲಿ ಉದ್ಯೋಗಿಯೊಬ್ಬರು ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಹಾಸಿಗೆಯಿಂದ ಎದ್ದು ಕಂಪ್ಯೂಟರ್ ಮೇಜಿನ ಬಳಿಗೆ ಹೋಗುವಾಗ ಜಾರಿ ಬಿದ್ದಿದ್ದರು. ಇದರಿಂದ ಉದ್ಯೋಗಿಯ ಬೆನ್ನುಹುರಿ ಮುರಿದಿತ್ತು. ಆದರೆ, ವಿಮಾ ಕಂಪನಿ ಪರಿಹಾರ ನೀಡಲು ನಿರಾಕರಿಸಿತ್ತು. ಉದ್ಯೋಗಿ ಕೆಲಸಕ್ಕೆ ಹೋಗುವಾಗ ಅಪಘಾತ ನಡೆದಿಲ್ಲ ಎಂದು ವಾದಿಸಿತ್ತು. ವಿಮಾ ಕಂಪನಿಯ ವಿರುದ್ದ ಉದ್ಯೋಗಿಯು ಕೋರ್ಟ್ ನಲ್ಲಿ ವಾದ ಹೂಡಿದ್ದರು. ಎರಡು ಕೆಳಹಂತದ ನ್ಯಾಯಾಲಯಗಳು ಉದ್ಯೋಗಿಯ ಹಕ್ಕನ್ನು ತಿರಸ್ಕರಿಸಿದ್ದವು. ಆದರೆ ಸಾಮಾಜಿಕ ಭದ್ರತಾ ವ್ಯವಹಾರಗಳ ನ್ಯಾಯಾಲಯವು ಉದ್ಯೋಗಿಯ ಪರವಾಗಿ ತೀರ್ಪು ನೀಡಿದೆ.
ಕೆಲಸ ಎಲ್ಲಿ ನಡೆದರೂ ಅದು ಕೆಲಸವೇ. ವರ್ಕ್ ಫ್ರಮ್ ವೇಳೆ ಹಾಸಿಗೆಯಿಂದ ಕೆಲಸಕ್ಕೆ ಹೋಗುವುದನ್ನು ವಿಮೆಯ ವ್ಯಾಪ್ತಿಯೊಳಗೆ ಬರಲಿದೆ ಅಂತಾ ಫೆಡರಲ್ ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಕೆಲಸದ ವೇಳೆ ನೌಕರ, ಹಾಸಿಗೆಯಿಂದ ಉಪಾಹಾರ ಸೇವಿಸದೆ ಟೇಬಲ್ ಮೇಲಿದ್ದ ಕಂಪ್ಯೂಟರ್ ಕಡೆಗೆ ಹೋಗುತ್ತಿದ್ದ. ಈ ವೇಳೆ ಉದ್ಯೋಗಿ ಗಾಯಗೊಂಡಿದ್ದಾರೆ. ಆದ್ದರಿಂದ ನೌಕರನಿಗೆ ಪರಿಹಾರ ಪಾವತಿಸಬೇಕೆಂದು ತೀರ್ಪು ನೀಡಿತು.
ಜರ್ಮನ್ ಫೆಡರಲ್ ಕೋರ್ಟ್ ಉದ್ಯೋಗಿಯ ಪರವಾಗಿ ತೀರ್ಪು ನೀಡುವಾಗ, ಉದ್ಯೋಗಿ ಕೆಲಸ ಮಾಡುವ ಸ್ಥಳದಲ್ಲಿ ಟೆಲಿವರ್ಕಿಂಗ್, ಅಂದರೆ ಮನೆಯಿಂದ ಕೆಲಸ ಮಾಡಲು ಕಂಪನಿಯಿಂದ ಪಡೆದ ಒಪ್ಪಿಗೆ ಇದೆ ಎನ್ನುವುದನ್ನು ಕಾತರಿ ಪಡಿಸಿಕೊಂಡಿದೆ. ಇಂತಹ ಅಪಘಾತದ ಸಂದರ್ಭದಲ್ಲಿ, ಉದ್ಯೋಗಿ ವಿಮಾ ಪ್ರಯೋಜನವನ್ನು ಪಡೆಯಲು ಪೂರ್ತಿ ಅರ್ಹ ಎಂದು ಕೋರ್ಟ್ ತೀರ್ಪು ನೀಡಿ, ವಿಮಾ ಕಂಪೆನಿಗೆ ಪರಿಹಾರ ನೀಡಲು ಸೂಚಿಸಲಾಗಿದೆ.
