Home » ಬೆಳ್ತಂಗಡಿ : ನವವಿವಾಹಿತೆ ನಾಪತ್ತೆ, ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ : ನವವಿವಾಹಿತೆ ನಾಪತ್ತೆ, ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

0 comments

ಬೆಳ್ತಂಗಡಿ : ನವವಿವಾಹಿತೆಯೋರ್ವಳು ನಾಪತ್ತೆಯಾದ ಕಾರಣ ಆಕೆಯ ತಂದೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಕಲ್ಮಂಜ ಗ್ರಾಮದ ಮುಲಾರು ನಿವಾಸಿ ಶ್ರೀನಿವಾಸ ಅವರ ಪುತ್ರಿ ಹರ್ಷಿತಾ (23) ಎಂದು ತಿಳಿದುಬಂದಿದೆ.

ಈಕೆಗೆ ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿತ್ತು. ತವರು ಮನೆಗೆ ಬಂದಿದ್ದ ಆಕೆ ನಿನ್ನೆ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment