3
ವಿವಾಹಿತ ವ್ಯಕ್ತಿಯೊಬ್ಬ ಪರ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಲ್ಲಿ ಆತನ ಹಿಂಬಾಲಿಸಿದ ಪತ್ನಿಗೆ ಶಾಕ್ ಆಗಿದೆ. ಆಕೆ ಗ್ರಹಿಸಿದ್ದೇ ನಿಜವಾಯಿತು, ಆತನಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು.
ಹೌದು, ಇಂತಹ ಘಟನೆಯೊಂದು ವರದಿಯಾದದ್ದು ಹೈದರಾಬಾದ್ ನ ಜಗದ್ಗೀರಿ ಗುಡ್ಡ ಎಂಬಲ್ಲಿ. ಅಲ್ಲಿನ ನಿವಾಸಿಯಾದ ಅನಿಲ್ ಎಂಬಾತನಿಗೆ ಈ ಮೊದಲು ಪರಮೇಶ್ವರಿ ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಆದರೆ ಕಳೆದ ಹಲವಾರು ದಿನಗಳಿಂದ ಗಂಡನ ನಡವಳಿಕೆ, ಮಾತಿನ ಶೈಲಿ, ಮನೆಗೆ ಬರುವ ಹೊತ್ತು ಎಲ್ಲವೂ ಚೇಂಜ್ ಆಗಿತ್ತು.
ಹೀಗೆ ಗಂಡನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಅನುಮಾನದಿಂದ ಪರಮೇಶ್ವರಿ ಮೊನ್ನೆಯ ದಿನ ಆತನನ್ನು ಹಿಂಬಾಲಿಸಿದ್ದು, ಪತಿಯನ್ನು ಹಿಂಬಾಲಿಸಿದಾಗ ಗಂಡನ ಇನ್ನೊಂದು ಮುಖ ಬಯಲಾಗಿದೆ.
ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆತನ ಸ್ಥಿತಿ ಅತಿಯಾಸೆಗೆ ಬಲಿಯಾಗಿ ನಿರಾಸೆಯಾಗಿದೆ ಎಂಬಂತೆ ಗ್ರಾಮಸ್ಥರು ವ್ಯಂಗವಾಡುತ್ತಿದ್ದಾರೆ.
