Home » ಈ ದೇಶದಲ್ಲಿ ಮುಂದಿನ ಹನ್ನೊಂದು ದಿನಗಳ ಕಾಲ ಯಾರು ನಗುವಂತಿಲ್ಲ !! | ಶಾಪಿಂಗ್, ಮಧ್ಯಪಾನ, ಹೊರಗಡೆ ಸುತ್ತಾಡೋದು ಎಲ್ಲವೂ ಬ್ಯಾನ್

ಈ ದೇಶದಲ್ಲಿ ಮುಂದಿನ ಹನ್ನೊಂದು ದಿನಗಳ ಕಾಲ ಯಾರು ನಗುವಂತಿಲ್ಲ !! | ಶಾಪಿಂಗ್, ಮಧ್ಯಪಾನ, ಹೊರಗಡೆ ಸುತ್ತಾಡೋದು ಎಲ್ಲವೂ ಬ್ಯಾನ್

by ಹೊಸಕನ್ನಡ
0 comments

ಉತ್ತರ ಕೊರಿಯಾದಲ್ಲಿ ಮುಂದಿನ ಹನ್ನೊಂದು ದಿನಗಳ ಕಾಲ ನಗುವಂತಿಲ್ಲ!! ಇದೇನಿದು ಈ ರೀತಿಯ ಕಾನೂನು ಎಂದು ಆಲೋಚಿಸುತ್ತಿದ್ದೀರಾ?? ಹೌದು, ಉತ್ತರ ಕೋರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ 10ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಉತ್ತರ ಕೊರಿಯಾದಲ್ಲಿ 11 ದಿನಗಳ ಕಾಲ ನಗುವುದನ್ನು ನಿಷೇಧಿಸಲಾಗಿದ್ದು, ಶೋಕಾಚರಣೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ಈ ಕುರಿತಂತೆ ಈಶಾನ್ಯ ಗಡಿ ನಗರವಾದ ಸಿನುಯಿಜುವಿನ ನಾಗರಿಕರೊಬ್ಬರು ಪ್ರತಿಕ್ರಿಯಿಸಿದ್ದು, ಪ್ರಜೆಗಳು ಮದ್ಯಪಾನ, ದಿನಸಿ, ಶಾಪಿಂಗ್ ಮಾಡಬಾರದು ಮತ್ತು ವಿರಾಮ ಚಟುವಟಿಕೆಯಲ್ಲಿ ತೊಡಗಬಾರದು. ಒಂದು ವೇಳೆ 11 ದಿನಗಳ ಶೋಕಾಚರಣೆಯ ಅವಧಿಯಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಈ ಮುನ್ನ ಶೋಕಾಚರಣೆಯ ವೇಳೆ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕೆಲವರನ್ನು ಬಂಧಿಸಿ ಅವರನ್ನು ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಿ ಪೊಲೀಸರು ಕರೆದೊಯ್ದಿದ್ದರು. ಆದರೆ ಮತ್ತೆ ಎಂದೂ ಅವರು ಕಾಣಿಸಿಕೊಂಡಿಲ್ಲ. ಅಲ್ಲದೇ ಶೋಕಾಚರಣೆಯ ಸಮಯದಲ್ಲಿ ಕುಟುಂಬದ ಸದಸ್ಯರೇ ಸತ್ತರೂ ಜೋರಾಗಿ ಅಳುವಂತಿಲ್ಲ. ಶೋಕಾಚರಣೆ ಮುಗಿದ ನಂತರವಷ್ಟೇ ದೇಹವನ್ನು ಹೊರತೆಗೆಯಬೇಕು. ಶೋಕ ದಿನಗಳಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುವಂತಿಲ್ಲ. ಶೋಕಾಚರಣೆಯ ಅವಧಿಯಲ್ಲಿ ಮನಸ್ಥಿತಿಗೆ ಹಾನಿ ಮಾಡುವವರನ್ನು ಗುರುತಿಸಿ ಶಿಕ್ಷಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿರುವುದಾಗಿ ತಿಳಿಸಿದ್ದಾರೆ.

ಕಿಮ್ ಜಾಂಗ್ ಇಲ್ ಅವರ ಪುಣ್ಯತಿಥಿಯ ಪ್ರಯುಕ್ತ ಉತ್ತರ ಕೊರಿಯಾದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳಲ್ಲಿ ಅವರ ಫೋಟೋ ಮತ್ತು ಪೇಟಿಂಗ್ ಅನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ ಮತ್ತು ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿದೆ.

You may also like

Leave a Comment