Home » 2029 ರಲ್ಲಿ ಭಾರತದ ಪ್ರಧಾನಿ ಪಟ್ಟ ಏರಲಿದ್ದಾರೆ ಓರ್ವ ಮುಸ್ಲಿಂ | ಹಾಗಂತ ಭವಿಷ್ಯ ನುಡಿದ್ದದ್ದು ಯಾರು ಗೊತ್ತಾ ?!

2029 ರಲ್ಲಿ ಭಾರತದ ಪ್ರಧಾನಿ ಪಟ್ಟ ಏರಲಿದ್ದಾರೆ ಓರ್ವ ಮುಸ್ಲಿಂ | ಹಾಗಂತ ಭವಿಷ್ಯ ನುಡಿದ್ದದ್ದು ಯಾರು ಗೊತ್ತಾ ?!

by Praveen Chennavara
0 comments

ಹರಿದ್ವಾರ(ಉತ್ತರಾಖಂಡ): ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಗಿರಿ ಅವರ ನೇತೃತ್ವದಲ್ಲಿ ನಡೆಯಿತು. ಮೊದಲ ದಿನ ಮಾತನಾಡಿದ ಸ್ವಾಮಿ ಯತಿ ನರಸಿಂಹಾನಂದ ಗಿರಿ, 2029ರ ವೇಳೆಗೆ ಭಾರತದಲ್ಲಿ ಹಿಂದೂಗಳಲ್ಲದವರು ಪ್ರಧಾನ ಮಂತ್ರಿಗಳಾಗುತ್ತಾರೆ. ಹೆಚ್ಹು ಕಮ್ಮಿ ಮುಸ್ಲಿಮರು 2029 ರಲ್ಲಿ ಭಾರತದ ಪ್ರಧಾನಮಂತ್ರಿಗಳ ಆಗಲಿದ್ದಾರೆ.

ಮೂರು ದಿನಗಳ ‘ಧರ್ಮ ಸಂಸದ್’ ಶುಕ್ರವಾರ ಉದ್ಘಾಟನೆಗೊಂಡಿದೆ. ಈ ಧಾರ್ಮಿಕ ಸಂಸತ್ತಿನಲ್ಲಿ ನೂರಾರು ಸಂತರು ಮತ್ತು ಸಾಮಾನ್ಯ ಜನರು ಭಾಗವಹಿಸುತ್ತಿದ್ದಾರೆ. ಮೂರನೇ ದಿನ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ಧರ್ಮ ಸಂಸದ್ ನೀಡುತ್ತದೆ. ಅದರಂತೆ 2029ರಲ್ಲಿ ಹಿಂದುವೇ ತರರು ಪ್ರಧಾನಿಯಾಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಅಲ್ಲಿ ನಡೆದ ಮೂರು ದಿನಗಳ ಸಭೆಯ ನಂತರ ಕೆಲವೊಂದು ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತದೆ. ಇದರಿಂದ ಸನಾತನ ಧರ್ಮವನ್ನು ಉಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಯತಿ ನರಸಿಂಹಾನಂದ ಗಿರಿ ಅಭಿಪ್ರಾಯಪಟ್ಟಿದ್ದಾರೆ. ಧರ್ಮ ಸಂಸದ್ ಗೆ ಬಂದಿದ್ದ ಸ್ವಾಮಿ ಆನಂದ್ ಬಾಬಾ, ಈಗ ದೇಶದಲ್ಲಿ ಮಾನವೀಯತೆ ಅಥವಾ ಬಂಡಾಯ ಎರಡರಲ್ಲಿ ಒಂದು ನೆಲೆಯೂರಲಿದೆ ಒಂದು ಭವಿಷ್ಯ ನುಡಿದಿದ್ದಾರೆ. ಹಿಂದೂಗಳು ಅಲ್ಲದವರು ಪ್ರಧಾನಮಂತ್ರಿಗಳು ಆಗದಂತೆ ತಪ್ಪಿಸಲು ಏನು ಮಾಡಬೇಕು ಎಂಬುದನ್ನು ಪರಿಗಣಿಸಲು ‘ಧರ್ಮ ಸಂಸದ್’ ಅನ್ನು ಆಯೋಜಿಸಲಾಗಿದೆ ಎಂದರು.

You may also like

Leave a Comment