Home » ಓಡಿದ ವೇಗಕ್ಕೆ ಡಿವೈಡರ್ ಗೆ ಬಡಿದು ಎರಡು ತುಂಡಾದ ಕಾರು | ಇಬ್ಬರು ಯುವ ನಟಿಯರು ಸೇರಿ ಮೂವರ ದುರ್ಮರಣ

ಓಡಿದ ವೇಗಕ್ಕೆ ಡಿವೈಡರ್ ಗೆ ಬಡಿದು ಎರಡು ತುಂಡಾದ ಕಾರು | ಇಬ್ಬರು ಯುವ ನಟಿಯರು ಸೇರಿ ಮೂವರ ದುರ್ಮರಣ

by Praveen Chennavara
0 comments

ಹೈದರಾಬಾದ್: ಅತೀ ವೇಗವಾಗಿ ಓಡಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಎರಡು ತುಂಡಾಗಿ ಬಿದ್ದಿದ್ದು, ಇಬ್ಬರು ಟಿವಿ ಸೀರಿಯಲ್ ನಟಿಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಹೈದರಾಬಾದಿನ ಗಚಿಬೋವ್ಲಿ ಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಲಾವಿದೆಯರಾದ 21 ವರ್ಷದ ಮಾನಸ ಎಂ, 23 ವರ್ಷದ ಮಾನಸ ಎನ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬ ಕಲಾವಿದ ಸಾಯಿ ಸಿಂಧು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಇನ್ನೋರ್ವ ಬ್ಯಾಂಕ್ ಉದ್ಯೋಗಿ ಅಬ್ದುಲ್ ರಹೀಮ್ ಕೂಡಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಕಲಾವಿದೆಯರಿಬ್ಬರು ಅಮರಪೇಟೆಯ ಹಾಸ್ಟೆಲ್ ನಲ್ಲಿ ವಾಸವಿದ್ದು ಇಬ್ಬರು ಟಿವಿ ಸೀರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಲಿಂಗಂಪಲ್ಲಿಗೆ ಪ್ರಯಾಣಿಸುತ್ತಿದ್ದು ಕಾರು ಅತಿವೇಗದಲ್ಲಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

You may also like

Leave a Comment