Home » ಎಸ್.ಡಿ.ಪಿ.ಐ ಮುಖಂಡ ಬರ್ಬರ ಹತ್ಯೆ | ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದಿಂದ ಕೃತ್ಯ

ಎಸ್.ಡಿ.ಪಿ.ಐ ಮುಖಂಡ ಬರ್ಬರ ಹತ್ಯೆ | ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದಿಂದ ಕೃತ್ಯ

by Praveen Chennavara
0 comments

ಕೇರಳ : ಎಸ್ ಡಿಪಿಐ ಕೇರಳ ರಾಜ್ಯ ಸಮಿತಿ ಸದಸ್ಯನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಕೆ.ಎಸ್ ಶಾನ್ ನಿನ್ನೆ ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳಿದ್ದ ಕಾರು ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರದಿಂದ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಾನ್ ನನ್ನು ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಿಂಗಳ ಹಿಂದೆ ಕೇರಳದಲ್ಲಿ ಆರ್.ಎಸ್‌ಎಸ್.ಕಾರ್ಯಕರ್ತನನ್ನು ಇದೇ ಮಾದರಿಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು.

You may also like

Leave a Comment