Home » ವಾಹನ ನೋಂದಣಿಗಾಗಿ ಬಿಹೆಚ್ ಸರಣಿಯ ನೋಂದಣಿ ಆರಂಭಿಸಿದ ರಾಜ್ಯ ಸರ್ಕಾರ | ಈ ನೋಂದಣಿಯಿಂದ ಯಾರಿಗೆಲ್ಲ ಲಾಭ??

ವಾಹನ ನೋಂದಣಿಗಾಗಿ ಬಿಹೆಚ್ ಸರಣಿಯ ನೋಂದಣಿ ಆರಂಭಿಸಿದ ರಾಜ್ಯ ಸರ್ಕಾರ | ಈ ನೋಂದಣಿಯಿಂದ ಯಾರಿಗೆಲ್ಲ ಲಾಭ??

by ಹೊಸಕನ್ನಡ
0 comments

ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಕಾರ್ಯವನ್ನು ರಾಜ್ಯ ಸರ್ಕಾರ ಇದೀಗ ಪ್ರಾರಂಭಿಸಿದೆ. ರಾಜ್ಯದ ಸರ್ಕಾರಿ ನೌಕರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸುಗಮವಾಗಿ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ವಾಹನ ಮಾಲೀಕರ ಆಯ್ದ ಗುಂಪಿಗೆ ಬಿಹೆಚ್ ಸರಣಿಯ ನೋಂದಣಿ ಸಂಖ್ಯೆಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಎರಡು ದಿನಗಳ ಹಿಂದೆ ಇಲಾಖೆಯು ಬಿಹೆಚ್ ಸರಣಿಯ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಆರಂಭಿಸಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ. ಪುರುಷೋತ್ತಮ್ ಮಾಹಿತಿ ನೀಡಿದ್ದಾರೆ.

ನಿಯಮಗಳ ಪ್ರಕಾರ ಬಿಹೆಚ್ ಸರಣಿಗಳನ್ನು ಬಯಸುವವರು ಕೇಂದ್ರ ಸರ್ಕಾರ ಅಥವಾ ಪಿಎಸ್‌ಯು ಉದ್ಯೋಗಿಗಳು ಅಥವಾ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಗಳು ಮತ್ತು ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರುವರಿಗೆ ಈ ಬಿಹೆಚ್ ಸರಣಿ ಸಿಗಲಿದೆ ಎಂದು ಪುರುಷೋತ್ತಮ್ ಹೇಳಿದ್ದಾರೆ.

ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ಬರುವ ವಾಹನಗಳು ರಾಜ್ಯಕ್ಕೆ ಪ್ರವೇಶಿಸಿದ ದಿನಾಂಕದಿಂದ 15 ದಿನಗಳಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಮುಂದಿನ 12 ತಿಂಗಳುಗಳ ಒಳಗಾಗಿ ಸ್ಥಳೀಯ ಆರ್‌ಟಿಓದಲ್ಲಿ ನೋಂದಣಿ ಮಾಡಬೇಕು. ಶುಲ್ಕ ಪಾವತಿಯ ಮೂಲಕ ಪ್ರಕ್ರಿಯೆ ನಡೆಸಬಹುದಾಗಿದೆ.

You may also like

Leave a Comment