ಲುಧಿಯಾನಾ: ಪಂಜಾಬ್ನ ಲುಧಿಯಾನಾ ನಗರದಲ್ಲಿರುವ ನ್ಯಾಯಾಲಯವೊಂದರ ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಇಂದು ಸ್ಫೋಟ ಉಂಟಾಗಿದೆ.
ಘಟನೆಯಲ್ಲಿ ಮಹಿಳೆ ಸೇರಿ, ಇಬ್ಬರು ಮೃತಪಟ್ಟಿದ್ದಾರೆ.ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ.ಅಲ್ಲದೆ ಕೆಳಗೆ ವಾಹನ ನಿಲುಗಡೆ ಜಾಗವೂ ಧ್ವಂಸಗೊಂಡಿದ್ದು,ಅಲ್ಲಿ ಹಾಕಿದ್ದ ಇಟ್ಟಿಗೆ, ಕಬ್ಬಿಣದ ಕಂಬಗಳು ಬಿದ್ದಿರುವ ಮಾಹಿತಿ ವರದಿಯಾಗಿದೆ.
ಇದು ಆರು ಮಹಡಿಗಳ ಕಟ್ಟಡವಾಗಿದ್ದು, ಎರಡನೇ ಮಹಡಿಯಲ್ಲಿರುವ ವಾಶ್ ರೂಂನಲ್ಲಿ ಸ್ಫೋಟವುಂಟಾಗಿದ್ದು,ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿ ಅಪಾರ ಜನ-ಸಾಗರ ಸೇರಿದೆ.ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.ಘಟನೆಯಲ್ಲಿ,ಕಟ್ಟಡದಿಂದ ಹೊಗೆ ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#India “Injuries feared following explosion inside a court in Ludhiana area of India's Punjab state, police say.” pic.twitter.com/wXOy3NagAu