Home » ಹಿಂದುತ್ವವನ್ನು ಐಸಿಸ್, ಬೋಕೊ ಹರಾಮ್ ಗೆ ಹೋಲಿಸಿದ ಸಲ್ಮಾನ್ ಖುರ್ಷಿದ್ | ಕೇಸು ದಾಖಲಿಸಲು ಕೋರ್ಟ್ ಸೂಚನೆ

ಹಿಂದುತ್ವವನ್ನು ಐಸಿಸ್, ಬೋಕೊ ಹರಾಮ್ ಗೆ ಹೋಲಿಸಿದ ಸಲ್ಮಾನ್ ಖುರ್ಷಿದ್ | ಕೇಸು ದಾಖಲಿಸಲು ಕೋರ್ಟ್ ಸೂಚನೆ

by Praveen Chennavara
0 comments

ವಿವಾದಿತ ಲೇಖಕ ,ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ತಮ್ಮ ಕೃತಿ `ಸನ್‌ರೈಸ್ ಓವರ್ ಅಯ್ಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್’ನಲ್ಲಿ ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್ ಹಾಗೂ ಬೊಕೋ ಹರಾಮ್‌ಗೆ ಹೋಲಿಸಿದ್ದಾರೆ.

ಸಲ್ಮಾನ್ ಖುರ್ಷಿದ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಲಕ್ಕೋದ ಮ್ಯಾಜಿಸ್ಟ್ರೇಟ್ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದೆ. ಎಫ್‌ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಮೂರು ದಿನಗಳೊಳಗೆ ಕಳುಹಿಸಬೇಕೆಂದೂ ಸೂಚಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಂಡಸಂಹಿತೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಸಲ್ಮಾನ್ ಖುರ್ಷಿದ್ ಅವರ ಕೃತಿಯ ಕೆಲ ಭಾಗಗಳು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುತ್ತಿವೆ ಎಂದು ದೂರಿ ಶುಭಾಂಗಿ ತ್ಯಾಗಿ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆ ತ್ಯಾಗಿ ಪೊಲೀಸ್ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸದೇ ಇರುವ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮೆಟ್ಟಿಲು ಹತ್ತಿದ್ದರು.

You may also like

Leave a Comment