4
ಚಲಿಸುತ್ತಿದ್ದ ಬಸ್ಸಿನಲ್ಲಿದ್ದ ನಿರ್ವಾಹಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾರ್ಮಾಡಿ ಘಾಟ್‌ನ ಮಲಯಮಾರುತ ಸಮೀಪ ಇಂದು ಬೆಳಗ್ಗೆ ನಡೆದಿದೆ.
ಮೃತ ನಿರ್ವಾಹಕರನ್ನು ವಿಜಯ್ (43) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನಲ್ಲಿದ್ದ ನಿರ್ವಾಹಕ ವಿಜಯ್ ಅವರಿಗೆ ಬೆಳಗ್ಗೆ 8.30ಕ್ಕೆ ಹೃದಯಾಘಾತ ಸಂಭವಿಸಿದೆ. ಈ ವೇಳೆ ಅವರನ್ನು ಬಣಕಲ್ ಸಮಾಜ ಸೇವಕ ಆರಿಫ್ ಅವರ ಆಂಬ್ಯುಲೆನ್ಸ್‌ನಲ್ಲಿ ಬಣಕಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಯಿತು.
ಆದರೆ ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿರ್ವಾಹಕ ವಿಜಯ್ ಮೃತಪಟ್ಟಿದ್ದಾರೆ.
