Home » ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ !! | ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ !! | ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

by ಹೊಸಕನ್ನಡ
0 comments

ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ.

ದೇಶದಲ್ಲಿ ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕಿನ ಅಟ್ಟಹಾಸ ಮೆರೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ನಿನ್ನೆ ರಾತ್ರಿ ಭಾಷಣ ಮಾಡಿದ್ದಾರೆ.

ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಹೊಸವರ್ಷ 2022 ಸ್ವಾಗತಿಸೋಣ ಎಂದು ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಓಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಶ್ವದಾದ್ಯಂತ ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ, ದೇಶದಲ್ಲಿ ಓಮಿಕ್ರಾನ್ ಸೋಂಕು ನಮ್ಮನ್ನು ಕಾಡುತ್ತಿದೆ. ಕೊರೋನಾ ರೂಪಾಂತರಿಯಾಗಿ ಪರಿವರ್ತನೆ ಹೊಂದುತ್ತಿದೆ. ಹೆಚ್ಚುವರಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ . ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಆರಂಭವಾಗಲಿದೆ. ಕೊರೊನಾ ವಿರುದ್ಧ ಭಾರತದ ಹೋರಾಟ ನಿಲ್ಲವುದಿಲ್ಲ ಎಂದಿದ್ದಾರೆ.

ಭಾರತದ ದೊಡ್ಡ ಜನಸಂಖ್ಯೆಯಲ್ಲಿ ಬಹುತೇಕರಿಗೆ ಎರಡು ಡೋಸ್ ಲಸಿಕೆಗಳು ಸಿಕ್ಕಿವೆ. ವಿಶ್ವದಲ್ಲಿ ಅತಿಹೆಚ್ಚು ಜನರಿಗೆ ನಾವು ಲಸಿಕೆ ನೀಡಿದ್ದೇವೆ . ದೇಶದ ಎಲ್ಲ ನಾಗರಿಕರ ಸಾಮೂಹಿಕ ಪರಿಶ್ರಮದಿಂದ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಈಗ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಾಗಿದೆ. ಕೊರೋನಾ ವಿರುದ್ಧ ಭಾರತ ಹೋರಾಟ ಮುಂದುವರೆಯುತ್ತಿದೆ. ಕೊರೋನಾ ಇನ್ನೂ ಕೂಡ ನಮ್ಮಿಂದ ದೂರ ಆಗಿಲ್ಲ. 12 ತಿಂಗಳಿನಿಂದ ವ್ಯಾಕ್ಸಿನೇಷನ್ ಆರಂಭವಾಗಿದೆ. ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ವಿರುದ್ಧ ಭಾರತದ ಹೋರಾಟ ಎಂದೂ ನಿಲ್ಲುವುದಿಲ್ಲ ಎಂದು ಹೇಳಿದರು.

You may also like

Leave a Comment