Home » ಪುಂಜಾಲಕಟ್ಟೆ : ಮೆದುಳು ನಿಷ್ಕ್ರಿಯಗೊಂಡಿದ್ದ ಮೂರ್ಜೆ ಸತೀಶ್ ಅವರ ಅಂಗಾಂಗ ದಾನ | ಸಾವಿನಲ್ಲೂ ಸಾರ್ಥಕತೆ ಮೆರೆದ ಸತೀಶ್

ಪುಂಜಾಲಕಟ್ಟೆ : ಮೆದುಳು ನಿಷ್ಕ್ರಿಯಗೊಂಡಿದ್ದ ಮೂರ್ಜೆ ಸತೀಶ್ ಅವರ ಅಂಗಾಂಗ ದಾನ | ಸಾವಿನಲ್ಲೂ ಸಾರ್ಥಕತೆ ಮೆರೆದ ಸತೀಶ್

by Praveen Chennavara
0 comments

ಬಂಟ್ವಾಳ : ಪುಂಜಾಲಕಟ್ಟೆಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಮೂರ್ಜೆ ನಿವಾಸಿ ಸತೀಶ್ ಎಂಬವರ ಮೆದುಳು ನಿಷ್ಕ್ರಿಯಗೊಂಡಿದ್ದು, ಇವರ ಅಂಗಾಂಗವನ್ನು ಮನೆಯವರ ಸಮ್ಮತಿಯಂತೆ ಆಸ್ಪತ್ರೆಗೆ ದಾನ ಮಾಡಲಾಯಿತು.

ಡಿ.26 ರಂದು ಪುಂಜಾಲಕಟ್ಟೆ ಬಳಿ ದ್ವಿಚಕ್ರ ವಾಹನ ಅಪಘಾತದಲ್ಲಿ ಸತೀಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದು, ಸತೀಶ್ ರವರ ಅಂಗಾಂಗವನ್ನು ದಾನಮಾಡಲು ಮನೆಯವರು ನಿರ್ಧರಿಸಿದ್ದರು.

ಅದರಂತೆ ಡಿ.29 ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಂಗಾಂಗ ದಾನದ ಸಕಲ ಪ್ರಕ್ರಿಯೆಗಳ ಬಳಿಕ ಸತೀಶ ರವರ ಹೃದಯ, ಲಿವರ್ ಹಾಗೂ ಎರಡೂ ಕಿಡ್ನಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಯಿತು.

You may also like

Leave a Comment