Home » ನಾಯಿಗೆ ಹೊಡೆಯುವುದನ್ನು ಪ್ರಶ್ನಿಸಿದ ವಿಚಾರ : ನಾಯಿ ಬದಲು ತಾವೇ ಕಚ್ಚಿಕೊಂಡರು !

ನಾಯಿಗೆ ಹೊಡೆಯುವುದನ್ನು ಪ್ರಶ್ನಿಸಿದ ವಿಚಾರ : ನಾಯಿ ಬದಲು ತಾವೇ ಕಚ್ಚಿಕೊಂಡರು !

by Praveen Chennavara
0 comments

ನಾಯಿಗಳು ಕಚ್ಚುವುದು ಸಾಮಾನ್ಯ. ನಾಯಿಗಳು ಪರಸ್ಪರ ಕಚ್ಚಿ ಕೊಳ್ಳುವುದು ಅತಿ ಸಾಮಾನ್ಯ. ಆದರೆ ನಾಯಿಯ ವಿಚಾರದಲ್ಲಿ ಇಬ್ಬರು ಮಹಿಳೆಯರು ತಾವೇ ಪರಸ್ಪರ ಕಚ್ಚಿಕೊಂಡಿದ್ದಾರೆ.

ಜರ್ಮನಿಯಲ್ಲಿ 51 ವರ್ಷದ ಮಹಿಳೆಯೊಬ್ಬಳು ತಾನೇ ಸಾಕಿದ್ದ ನಾಯಿ ಏನೋ ತಪ್ಪು ಮಾಡಿತೆಂದು ಅದಕ್ಕೆ ಥಳಿಸುತ್ತಿದ್ದಳಂತೆ. ಅಲ್ಲೇ ಪಕ್ಕದಲ್ಲಿ 27 ವರ್ಷದ ಮಹಿಳೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದು, ಆ ದೃಶ್ಯವನ್ನು ಕಂಡವಳೇ ನಾಯಿಗೆ ಹೊಡೆಯುತ್ತಿದ್ದ ಮಹಿಳೆಯ ಬಳಿ ಬಂದು ನಾಯಿಗೆ ಹೋಡೆಯಬೇಡ ಎಂದಿದ್ದಾಳೆ. ಮಾತಿಗೆ ಮಾತು ಬೆಳೆದು, ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಆಗ ನಾಯಿಗೆ ಹೊಡೆಯುತ್ತಿದ್ದ ಮಹಿಳೆ ಕೆಳಗೆ ಬಿದ್ದಿದ್ದಾಳೆ. ಸಿಟ್ಟಿನಿಂದ ಆಕೆ, 27 ವರ್ಷದ ಮಹಿಳೆಯ ಕಾಲನ್ನು ಕಚ್ಚಿದ್ದಾಳೆ. ಅಲ್ಲೇ ನಿಂತಿದ್ದ ಎರಡು ನಾಯಿಗಳು ತಮ್ಮ ಮಾಲಕಿಯರು ಈ ರೀತಿ ಕಚ್ಚಾಡುವುದನ್ನು ನೋಡಿ ದಂಗಾಗಿ ನೋಡುತ್ತಾ ನಿಂತಿವೆ.

You may also like

Leave a Comment