Home » ಅಂಚೆ ಇಲಾಖೆ: ನೇರ ನೇಮಕಾತಿ ಅರ್ಜಿ ಆಹ್ವಾನ

ಅಂಚೆ ಇಲಾಖೆ: ನೇರ ನೇಮಕಾತಿ ಅರ್ಜಿ ಆಹ್ವಾನ

by Praveen Chennavara
0 comments

ಮಂಗಳೂರು : ಅಂಚೆ ಇಲಾಖೆಯಲ್ಲಿ ಅಂಚೆ ನಿರೀಕ್ಷಕರ ನೇರ ಆರ ನೇಮಕಾತಿಯು ಸಿಬಂದಿ ನೇಮಕಾತಿ ಆಯೋಗದ ಜಿಜಿಎಲ್ ಇ 2021 ಪರೀಕ್ಷೆಯ ಮೂಲಕ ನಡೆಯಲಿದೆ. ಇದರ ಅಧಿಸೂಚನೆ ಈಗಾಗಲೇ ಆಯೋಗದ ವೆಬ್‌ಸೈಟ್ https://ssc.nic.in ನಲ್ಲಿ ಲಭ್ಯವಿದೆ.

ಅರ್ಜಿ ಸಲ್ಲಿಸಲು ಜ. 23 ಕೊನೆಯ ದಿನ, ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದ ಯಾವುದೇ ಪದವಿ ಅಥವಾ ತತ್ಸಮಾನ ಪದವಿ ಪಡೆದಿ ರಬೇಕು. 2022ರ ಜ. 1ಕ್ಕೆ ಅನ್ವಯವಾಗುವಂತೆ 18ರಿಂದ 30 ವರ್ಷ (ಇತರ ವರ್ಗಗಳಿಗೆ ಅರ್ಹ ಸಡಿಲಿಕೆಯೊಂದಿಗೆ ) ಹೊಂದಿದವರಿಗೆ ಅವಕಾಶ ಇರುತ್ತದೆ.

ಆಸಕ್ತರು https://ssc.nic.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ವೇತನ ಶ್ರೇಣಿ, ವಯೋಮಿತಿ, ಇಂದು ಮೀಸಲಾತಿ, ಪರೀಕ್ಷಾ ವಿಧಾನ, ಶುಲ್ಕ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯು ಆಯೋಗದ ವೆಬ್‌ಸೈಟ್‌ನಲ್ಲಿರುವ ನೋಟಿಫಿಕೇಷನ್‌ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

You may also like

Leave a Comment