Home » ಉಪ್ಪಿನಂಗಡಿ : ಶೌಚಾಲಯಕ್ಕೆ ಹೋಗಿದ್ದ ವೇಳೆ ಕುಸಿದು ಬಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

ಉಪ್ಪಿನಂಗಡಿ : ಶೌಚಾಲಯಕ್ಕೆ ಹೋಗಿದ್ದ ವೇಳೆ ಕುಸಿದು ಬಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

by Praveen Chennavara
0 comments

ಉಪ್ಪಿನಂಗಡಿ : ಶೌಚಾಲಯಕ್ಕೆ ಹೋಗಿದ್ದ ವೇಳೆ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಬಜತ್ತೂರು ಗ್ರಾಮದ ಬೆದ್ರೋಡಿಯ ಯುವಕನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬಜತ್ತೂರು ಗ್ರಾಮದ ಬೆದ್ರೋಡಿ ದಿ.ಬಾಲಕೃಷ್ಣ ಗೌಡರವರ ಪುತ್ರ ಸುರೇಶ್(26ವ.)ಮೃತಪಟ್ಟ ದುರ್ದೈವಿ ಯುವಕ. ಸುರೇಶ್ ಡಿ.30ರಂದು ಬೆಳಿಗ್ಗೆ 5.30ರ ವೇಳೆಗೆ ಶೌಚಾಲಯಕ್ಕೆ ಹೋದವರು ಅಲ್ಲೇ ಕುಸಿದು ಬಿದ್ದಿದ್ದರು.

ಬಳಿಕ ಮನೆಯವರು ಶೌಚಾಲಯದ ಬಾಗಿಲು ಮುರಿದು ಒಳಪ್ರವೇಶಿಸಿ ಸುರೇಶ್‌ರವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆತಂದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುರೇಶ್‌ರವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬೈನ್ ಎಮರೇಜ್‌ನಿಂದ ಸುರೇಶ್ ಮೃತಪಟ್ಟಿರುವುರುವುದಾಗಿ ತಿಳಿದುಬಂದಿದೆ.

You may also like

Leave a Comment