Home » 1.10 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದ 21 ವರ್ಷದ ಯುವತಿ

1.10 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದ 21 ವರ್ಷದ ಯುವತಿ

by Praveen Chennavara
0 comments

ಪ್ರಸ್ತುತ ಇಂಜಿನಿಯರಿಂಗ್ ಪದವೀಧರರಿಗೆ ಆಫರ್‌ಗಳ ಸುರಿಮಳೆಯೆ ದೊರಕುತ್ತಿದೆ. ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್ ಗೂಗಲ್‌ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್‌ಗಳ ಕೆಲಸವನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಫೆಬ್ರವರಿ 14 ರಂದು ಗೂಗಲ್ ಕಂಪನಿಗೆ ಸೇರಲಿದ್ದಾರೆ.

ಸಂಪ್ರೀತಿ 2014ರಲ್ಲಿ ನೋಡೇಮ್ ಅಕಾಡೆಮಿಯಲ್ಲಿ 10ನೇ ತರಗತಿಯನ್ನು ಪೂರೈಸಿದರು. ಬಳಕ ದೆಹಲಿಯ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 12 ನೇ ತರಗತಿ ವ್ಯಾಸಂಗ ಮಾಡಿದ್ದಾರೆ.

ಇದಾದ ಬಳಿಕ 2016ರಲ್ಲಿ ಜೆಇಇ ಮೇನ್ಸ್‌ನಲ್ಲಿ ಉತ್ತೀರ್ಣರಾದರು. ಕಳೆದ ವರ್ಷ ಮೇ ತಿಂಗಳಲ್ಲಿ ಸಂಪ್ರೀತಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಬಿ ಟೆಕ್ ಪದವಿ ಪೂರ್ಣಗೊಳಿಸಿದ್ದಾರೆ.

ಪ್ರಸ್ತುತ ಇವರು 44 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್‌ನಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

You may also like

Leave a Comment