Home » ಹೆಲಿಕಾಪ್ಟರ್ ಹಾರಾಟದಿಂದ ಕಟ್ಟಡ ಮಾಲೀಕನಿಗೆ 25 ಸಾವಿರ ರೂ. ನಷ್ಟ!

ಹೆಲಿಕಾಪ್ಟರ್ ಹಾರಾಟದಿಂದ ಕಟ್ಟಡ ಮಾಲೀಕನಿಗೆ 25 ಸಾವಿರ ರೂ. ನಷ್ಟ!

0 comments

ಎತ್ತುಮನೂರು: ಹೆಲಿಕಾಪ್ಟರ್​ವೊಂದು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ ಪರಿಣಾಮ ಕೇರಳದ ಕೊಟ್ಟಾಯಂ ಕಟ್ಟಡದ ಮೇಲ್ಚಾವಣಿ ಹಾನಿಯಾಗಿದ್ದು, ಸುಮಾರು 25 ಸಾವಿರ ರೂಪಾಯಿ ನಷ್ಟವಾದ ಘಟನೆ ನಡೆದಿದೆ.

ಈ ಘಟನೆ ಎತ್ತುಮನೂರಿನ ವಲ್ಲಿಕಾಡುವಿನಲ್ಲಿರುವ ಕುರಿಶುಮಲ ಏರಿಯಾದಲ್ಲಿ ಬುಧವಾರ ಬೆಳಗ್ಗೆ 10.45ರ ಸುಮಾರಿಗೆ ನಡೆದಿದೆ.ಈ ಕಟ್ಟಡದ ಮಾಲೀಕ ಕ್ಯಾನ್ಸರ್​ ರೋಗಿ ಎಂಬುದು ತಿಳಿದುಬಂದಿದೆ.

ಹೆಲಿಕಾಪ್ಟರ್​ನಿಂದ ಬಂದ ಜೋರಾದ ಗಾಳಿಯು ಕ್ಯಾನ್ಸರ್​ ರೋಗಿ ಎಂ.ಡಿ. ಕುಂಜಿಮೊನ್ ಅವರ ಕಟ್ಟಡದ ಪಕ್ಕದಲ್ಲಿ ವಾಹನಗಳ ಪೇಂಟಿಂಗ್​ ವರ್ಕ್​ಶಾಪ್ ಅನ್ನು ಹಾನಿಗೊಳಿಸಿದೆ. ವರ್ಕ್​ಶಾಪ್​ನ ಮೇಲ್ಚಾವಣಿಗೆ ದುಬಾರಿ ಟಾರ್ಪಲಿನ್​ ಅನ್ನು ಬಳಸಲಾಗಿತ್ತು. ಆದರೆ, ಗಾಳಿಯ ರಭಸಕ್ಕೆ ಟಾರ್ಪಲಿನ್​ ಕಿತ್ತುಹೋಗಿದೆ.ಅಲ್ಲದೆ, ಆ ಸ್ಥಳವು ಧೂಳಿನಿಂದ ಕೂಡಿತ್ತು ಮತ್ತು ನೆಲದ ಮೇಲಿದ್ದ ಕಲ್ಲುಗಳು ಮತ್ತು ವಸ್ತುಗಳನ್ನು ಸಹ ಗಾಳಿಯಿಂದ ಎಸೆಯಲಾಯಿತು.

ಗಾಳಿಯ ರಭಸ ನೋಡಿದ ವರ್ಕ್​ಶಾಪ್​ ಕೆಲಸಗಾರರು ಹೊರಗೆ ಓಡಿಬಂದಿದ್ದಾರೆ. ಆದರೆ, ಕ್ಯಾನ್ಸರ್​ ರೋಗಿಯಾಗಿದ್ದ ಕುಂಜಿಮೊನ್​ ಹೊರಗೆಬರಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಅಲ್ಲಿ ಏನು ನಡೆಯಿತು ಎಂಬುದು ಸಹ ಯಾರಿಗೂ ತಿಳಿಯಲಿಲ್ಲ. ಇದಾದ ಕೆಲವು ಸಮಯದ ಬಳಿಕ ಹೆಲಿಕಾಪ್ಟರ್​ನಿಂದ ಉಂಟಾದ ಅವ್ಯವಸ್ಥೆ ಎಂದು ತಿಳಿದುಬಂದಿದೆ.

ಸ್ಥಳೀಯರ ಪ್ರಕಾರ, ಅದೇ ಹೆಲಿಕಾಪ್ಟರ್ ಅದೇ ವಾರ್ಡ್‌ನ ಮತ್ತೊಂದು ಪ್ರದೇಶದಲ್ಲಿ ಕೆಳಮಟ್ಟದಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಹೆಲಿಕಾಪ್ಟರ್ ನೌಕಾಪಡೆಯದ್ದು ಎಂದು ಶಂಕಿಸಲಾಗಿದೆ. ಕೀಮೋ ಚಿಕಿತ್ಸೆಗೆ ಒಳಗಾಗಿರುವ ಕುಂಜಿಮೋನ್ ತನಗೆ 25,000 ರೂಪಾಯಿ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕುರವಿಲಂಗಾಡ್ ಮತ್ತು ಎತ್ತುಮನೂರು ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಯಾವುದೇ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿಲ್ಲ. ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಪಂಚಾಯಿತಿ ತಿಳಿಸಿದೆ. ತಡರಾತ್ರಿಯ ವೇಳೆಗೆ, ಕೊಟ್ಟಾಯಂ ಹೆಚ್ಚುವರಿ ಎಸ್ಪಿ ಈ ಬಗ್ಗೆ ತನಿಖೆ ನಡೆಸುವಂತೆ ಎತ್ತುಮನೂರು ಪೊಲೀಸರಿಗೆ ಸೂಚಿಸಿದರು.

You may also like

Leave a Comment