Home » ಮೀನು ದಾಳಿಗೆ ನಾಲ್ವರು ಸಾವು, ಹಲವರಿಗೆ ಗಾಯ!

ಮೀನು ದಾಳಿಗೆ ನಾಲ್ವರು ಸಾವು, ಹಲವರಿಗೆ ಗಾಯ!

by Praveen Chennavara
0 comments

ದಕ್ಷಿಣ ಅಮೇರಿಕಾದ ಪೆರಾಗ್ವೆಯಲ್ಲಿ ಫಿರಾನ್ಹ ಮೀನುಗಳ ದಾಳಿಯಿಂದ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಾಳುಗಳಾಗಿದ್ದಾರೆ.

ಅಮೆರಿಕದಲ್ಲಿ ಉಷ್ಣಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ನದಿಗಳ ಪ್ರಯಾಣ ಆರಂಭಿಸಿ, ತಣ್ಣಗಿರುವ ಪ್ರಯತ್ನ ನಡೆಸಿದ್ದಾರೆ.

ಪೆರಾಗ್ವೆಯಲ್ಲಿ ನದಿ ಬಳಿ ಹೆಚ್ಚಿನ ಜನರು ಸೇರುತ್ತಿದ್ದು, ಅಲ್ಲಿ ಪಿರಾನ್ಹಾ ಮೀನು ದಾಳಿ ಸಂಭವಿಸುತ್ತಿರುವುದಾಗಿ ವರದಿಯಾಗಿದೆ.

ಜ.2ರಂದು ಪರಾಗ್ವೆ ನದಿಯಲ್ಲಿ ಆಟವಾಡುತ್ತಿದ್ದ 22 ವರ್ಷದ ಯುವಕ ನಾಪತ್ತೆಯಾಗಿದ್ದ. ಕೆಲ ಹೊತ್ತಿನ ನಂತರ ಆತನ ಮೃತ ದೇಹ ಪತ್ತೆಯಾಗಿದೆ. ಅದರಲ್ಲಿ ಪಿರಾನ್ಹಾ ಮೀನು ಆತನಿಗೆ ಗಂಭೀರವಾಗಿ ಗಾಯ ಮಾಡಿರುವುದು ಗೊತ್ತಾಗಿದೆ. ಆದಾದ ನಂತರ ಅದೇ ನದಿಯಲ್ಲಿ 49 ವರ್ಷದ ವ್ಯಕ್ತಿ ಕೂಡ ಇದೇ ರೀತಿ ಸಾವನ್ನಪ್ಪಿದ್ದಾನೆ. ಹಾಗೆಯೇ ಜ.2ರಂದು ಟೆಬಿಕ್ಯುರಿ ನದಿಯಲ್ಲಿ ಇಬ್ಬರು ಮೀನಿನ ದಾಳಿಯಿಂದಾಗಿ ಸಾವನ್ನಪ್ಪಿರುವುದು ವರದಿಯಾಗಿದೆ.

You may also like

Leave a Comment