Home » ಕೋತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು 1,500 ಜನ

ಕೋತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು 1,500 ಜನ

by Praveen Chennavara
0 comments

ಮನುಷ್ಯನ ಗುಣ, ಋಣ ಏನೆಂದು ಆತ ಸತ್ತಾಗ ತಿಳಿಯುತ್ತೆ ಅಂತಾರೆ. ಅದಕ್ಕೆ ಕಾರಣ ಅವನು ಸತ್ತಾಗ ಸೇರುವ ಜನ. ಆದ್ರೆ ಈಗ ದೇಶದ ಮೂಲೆಮೂಲೆಯಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.

ಏನೆ ಆದ್ರೂ 100 ಜನ ಸೇರುವ ಹಾಗಿಲ್ಲ. ಆದ್ರೆ ಅಲ್ಲೊಂದು ಹಳ್ಳಿಯಲ್ಲಿ ಬೇರೆಯದ್ದೇ ದೃಶ್ಯ ಕಂಡು ಬಂದಿದೆ. ಕೋತಿ ಸಾವಿಗೇನೆ ಸಾವಿರಾರು ಜನ ಸೇರಿದ್ದಾರೆ.

ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ. ಮೃತ ಕೋತಿ ಸಾಕು ಪ್ರಾಣಿಯಾಗಿರಲಿಲ್ಲ. ಆದರೆ, ಆಗಾಗ ರಾಜ್‌ಘಡ್ ಜಿಲ್ಲೆಯ ದಲುಪರ ಗ್ರಾಮಕ್ಕೆ ಬರುತ್ತಿತ್ತು.

ಇದೇ ಪ್ರೀತಿ ಇಡೀ ಗ್ರಾಮಸ್ಥರಿಗೆ ಇತ್ತು. ಕೋತಿ ಬಂದಾಗೆಲ್ಲಾ ತಿನ್ನೋದಕ್ಕೆ ಏನಾದರೂ ನೀಡುತ್ತಿದ್ದರು. ಹೀಗಾಗಿ ಕೋತಿ ಸತ್ತ ನಂತರ ಇಡೀ ಗ್ರಾಮಸ್ಥರು ಶಾಸ್ರೋಕ್ತವಾಗಿ ಕೋತಿಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಕೋತಿಯ ಶವವನ್ನು ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಹಾಗೇ ಗ್ರಾಮದ ಯುವಕನೊಬ್ಬ ಕೋತಿ ಸತ್ತಿದ್ದಕ್ಕೆ ತಲೆ ಬೋಳಿಸಿಕೊಂಡು ವಿಧಿವಿಧಾನದ ಮೂಲಕ ಕೋತಿಯ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ.

ಅನಂತರ ಅದರ ತಿಥಿ ಮಾಡಿದ್ದಾರೆ. ಅದರಲ್ಲಿ 1,500 ಜನ ಸೇರಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ.

You may also like

Leave a Comment