ಮಂಗಳೂರು: ಬೈಕಂಪಾಡಿಯಲ್ಲಿರುವ ಮೀನು ಸಂಸ್ಕರಣಾ ಘಟಕದಲ್ಲಿ ರಾಸಾಯನಿಕ ಸೋರಿಕೆಯಾಗಿ ಉದ್ಯೋಗಿಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಘಟನೆ ಇಂದು ನಡೆದಿದೆ.
ಮಂಗಳೂರು ನಗರದ ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನು ಸಂಸ್ಕರಣಾ ಘಟಕವಾದ ಎವರೆಸ್ಟ್ ಸೀ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಈ ಘಟನೆ ನಡೆದಿದ್ದು,ಈ ಸಮಯದಲ್ಲಿ ಕನಿಷ್ಠ 80 ಉದ್ಯೋಗಿಗಳು ಅಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ರಾಸಾಯನಿಕ ಸೋರಿಕೆಯಾದ ನಂತರ 20 ಉದ್ಯೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ,ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಧಾವಿಸಿವೆ. ಅಪಘಾತಕ್ಕೆ ಕಾರಣ ಏನೆಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
Karnataka | 20 employees of a fish processing plant have been hospitalized after a chemical leakage at the unit in Baikampady, on the outskirts of Mangaluru city. 80 employees were present in the plant at the time of the incident: Mangaluru Police Commissioner N Shashi Kumar pic.twitter.com/LlRYqkzxad