2
ಬೆಳ್ತಂಗಡಿ:ಧರ್ಮಸ್ಥಳ ಅನ್ನ ಛತ್ರದಲ್ಲಿ ಗಾರೆ ಕೆಲಸ ನಿರ್ವಹಿಸುತಿದ್ದ ವೇಳೆ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತ ಪಟ್ಟ ಘಟನೆ ಇಂದು ನಡೆದಿದೆ.
ಮೃತರು ವೇಣೂರು ಮುದ್ದಾಡಿ ನಿವಾಸಿ ದಿನೇಶ್(40) ಎಂಬುವವರೆಂದು ಗುರುತಿಸಲಾಗಿದೆ.
ಇವರು ಕಟ್ಟಡ ಕಾರ್ಮಿಕ ಕೆಲಸದವರಾಗಿದ್ದು, ಛತ್ರದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ 9.30 ರ ಸರಿ ಸುಮಾರಿಗೆ ಸಂಭವಿಸಿದೆ.ಮೃತರ ದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
