Home » ಅವಳಿಗಾಗಿ ಒಂದು ‘ ಅವಳ್ ಕಾಯಿ ‘ | ಇದು ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ

ಅವಳಿಗಾಗಿ ಒಂದು ‘ ಅವಳ್ ಕಾಯಿ ‘ | ಇದು ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ

0 comments

ತಿರುವನಂತಪುರಂ : ಕೇರಳದ ಕುಂಬಳಂಗಿ ಗ್ರಾಮವು ಸ್ಯಾನಿಟರಿ ಮುಕ್ತ ಗ್ರಾಮವಾಗಿ ಬೆಳೆಯಲು ದಿಟ್ಟ ಹೆಜ್ಜೆಯನ್ನು ಮುಂದಿಟ್ಟುಕೊಂಡಿದೆ. ಹೌದು, ಹೆಣ್ಣುಮಕ್ಕಳು ಋತುಮತಿಯಾದಾಗ ಸ್ಯಾನಿಟರಿ ನ್ಯಾಪ್ ಕಿನ್ ಬಳಸುವ ಬದಲು ಮೆನ್ ಸ್ಟ್ರುವಲ್ ಕಪ್ ಬಳಸುವ ಅಂಗವಾಗಿ ಈ ಬೆಳವಣಿಗೆ ನಡೆದಿದೆ.

ಎರ್ನಾಕುಲಂ ಜಿಲ್ಲೆಯ ಗ್ರಾಮದಲ್ಲಿರುವ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣುಮಕ್ಕಳಿಗೆ 5 ಸಾವಿರ ಮೆನ್ ಸ್ಟ್ರುವಲ್ ಕಪ್ ಗಳನ್ನು ವಿತರಿಸಲಾಗಿದೆ.

ಈ ಬಗ್ಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ” ದೇಶದಲ್ಲಿಯೇ ಸ್ಯಾನಿಟರಿ ಪ್ಯಾಡ್ ಗಳಿಂದ ಮುಕ್ತವಾದ ಮೊದಲ ಗ್ರಾಮ ಇದು” ಎಂದು ಹೇಳಿದರು.

” ಅವಳ್ ಕಾಯಿ” ಅಂದರೆ ಅವಳಿಗೋಸ್ಕರ ಎಂಬ ವಿಶಿಷ್ಟ ಅಭಿಯಾನವನ್ನು ಎರ್ನಾಕುಲಂ ಲೋಕಸಭೆ ಕ್ಷೇತ್ರದಲ್ಲಿ ಆರಂಭಿಸಲಾಯಿತು. ಈ ಅಭಿಯಾನ ಕಂಬಳಂಗಿ ಗ್ರಾಮದಲ್ಲಿ ನೀಡಲಾಗಿದೆ ಎಂದು ಸಂಸದ ಹಿಬಿ ಇಡೆನ್ ತಿಳಿಸಿದರು.

ಈ ಅಭಿಯಾನಕ್ಕೆ ಹೆಚ್ ಎಲ್ ಎಲ್ ಮ್ಯಾನೇಜ್ಮೆಂಟ್ ಅಕಾಡೆಮಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ನೆರವು ನೀಡಿದೆ. ಇದೇ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಕಂಬಳಂಗಿ ಗ್ರಾಮವನ್ನು ‘ ಮಾದರಿ ಗ್ರಾಮ’ ಎಂದೂ ಘೋಷಣೆ ಮಾಡಿದ್ದಾರೆ.

ಪ್ರಧಾನ ಮಂತ್ರಿ ಸಂಸದ್ ಆದರ್ಶ ಗ್ರಾಮ ಯೋಜನೆ ( ಎಸ್ ಜಿವೈ) ಅಡಿಯಲ್ಲಿ ಮಾದರಿ ಗ್ರಾಮವನ್ನು ನಿರ್ಮಿಸಲಾಗಿದೆ.

ಋತುಚಕ್ರದ ಸಮಯದಲ್ಲಿ ಬಳಸುವ ಋತುಸ್ರಾವ ಕಪ್ ಗಳು ಮರುಬಳಕೆ ಮಾಡಬಹುದಾದ ಕಪ್ ಗಳು. ಇದನ್ನು ರಬ್ಬರ್ ಅಥವಾ ಸಿಲಿಕಾನ್ ನಿಂದ ತಯಾರಿಸಲಾಗುತ್ತದೆ. ಹಾಗೆಯೇ ಇದರ ಬಳಕೆ ಕೂಡಾ ಸುಲಭ.

You may also like

Leave a Comment